ಬೆಂಗಳೂರು: ಬಿಡುವಿಲ್ಲದ ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಂದಾಗಿ ಅನಾರೋಗ್ಯಕ್ಕೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದ ವಿಕ್ರಂ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಸುಸ್ತು, ಅಸಿಡಿಟಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ವಿಕ್ರಮ್ ಆಸ್ಪತ್ರೆ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡರು.
ಬಿಪಿ, ಶುಗರ್ ಚೆಕಪ್ ಮಾಡಿದ ವೈದ್ಯರು ಮೈಸೂರು ಪ್ರಚಾರದ ವೇಳೆ ತಲೆಗೆ ಏಟು ಬಿದ್ದು ತಲೆ ನೋವು ಕಾಣಿಸಿಕೊಂಡ ಮಾಹಿತಿ ಪಡೆದು ತಲೆಗೆ ಗಾಯವಾಗಿದ್ದನ್ನ ಪರಿಶೀಲಿಸಿದರು. ನಂತರ ಅದು ಸಣ್ಣ ಗಾಯ ಏನೂ ಆಗೋದಿಲ್ಲ ಎಂದು ಮುಲಾಮು ಹಚ್ಚಲು ತಿಳಿಸಿದ ವೈದ್ಯರು ಕೆಲ ಸಲಹೆಗಳನ್ನು ನೀಡಿ ಆಸ್ಪತ್ರೆಯಿಂದ ಕಳುಹಿಸಿಕೊಟ್ಟರು ಎಂದು ತಿಳಿದು ಬಂದಿದೆ.
ಸಿಎಂ ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಸಚಿವ ಡಿ.ಕೆ.ಶಿವಕುಮಾರ್ ಕೂಡ ದೌಡಾಯಿಸಿದರು. ಚಿಕಿತ್ಸೆ ವೇಳೆ ಹಾಜರಿದ್ದರು.
Click this button or press Ctrl+G to toggle between Kannada and English