ಚುನಾವಣೆಗೆ ಜೆಡಿಯು ಸಿದ್ಧ, ಬಿಜೆಪಿ ಜೊತೆ ಹೊಂದಾಣಿಕೆ ಇಲ್ಲ: ಮಹಿಮಾ ಪಟೇಲ್‌

6:12 PM, Tuesday, April 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

janathdalಬೆಂಗಳೂರು: ಮೇ ತಿಂಗಳಿನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಸ್ಪರ್ಧೆ ಮಾಡಲು ಸಜ್ಜಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಎನ್‌ಡಿಎ ಭಾಗವಾದರೂ ನಾವು ರಾಜ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದೇವೆ. ಬಿಜೆಪಿ ವಿರುದ್ಧವೂ ಇಲ್ಲಿ ನಮ್ಮ ಸ್ಪರ್ಧೆ ಇರಲಿದೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೇರೆ ಬೇರೆ ಜಿಲ್ಲೆ ಪ್ರವಾಸ ಮಾಡಿದ್ದು, ಪಕ್ಷದ ಸಂಘಟನೆ ಮಾಡಿ ಪದಾಧಿಕಾರಿಗಳನ್ನು ನೇಮಿಸಿ ಚುನಾವಣೆಗೆ ಸಂಪೂರ್ಣ ಸನ್ನದ್ಧರಾಗಿದ್ದೇವೆ. ಏಪ್ರಿಲ್ 11 ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದರು.

ಜೆಡಿಯು ಬಿಟ್ಟು ಸರ್ಕಾರ ರಚಿಸಲು ಸಾಧ್ಯವಿಲ್ಲದಂತೆ ನಾವು ಕೆಲಸ ಮಾಡುತ್ತೇವೆ. ಅದಕ್ಕೆ ಪೂರಕವಾಗಿ ಒರಿಸ್ಸಾ ಸೇರಿ ಹಲವು ಕಡೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಮಹತ್ವದ ಪಾತ್ರ ವಹಿಸಿದ್ದ ಜೆಡಿಯುನ ಮುಖಂಡ ಚಂದ್ರ ಮಿಶ್ರಾರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಅವರು ಚುನಾವಣಾ ತಂತ್ರ ರೂಪಿಸಲಿದ್ದಾರೆ ಎಂದರು.

ಈಗಾಗಲೇ 50-60 ಜನ ನಮ್ಮನ್ನು ಸಂಪರ್ಕ ಮಾಡಿದ್ದಾರೆ. ಟಿಕೆಟ್ ಸಿಗದವರು ನಮ್ಮ ಕಡೆ ಬರುತ್ತಿದ್ದಾರೆ. ಬಂದವರನ್ನು ನಾವು ಹೊರದಬ್ಬಲ್ಲ. ಅವರ ಹಿನ್ನೆಲೆ ಪರಿಶೀಲಿಸಿ ಯೋಗ್ಯರಿಗೆ ಬೆಂಬಲ ನೀಡಿತ್ತೇವೆ. ದಾವಣಗೆರೆ 2, ಕಲಬುರಗಿ 1, ಧಾರವಾಡ 2, ಕೋಲಾರ 1, ಬೆಂಗಳೂರು ನಗರ 2-3 ಅಭ್ಯರ್ಥಿ ಗುರಿತಿಸಲಸಗಿದೆ. ನಾನು ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದರು.

ಕಳೆದ ವಾರ ನಿತೀಶ್ ಕುಮಾರ್ ಭೇಟಿ ವೇಳೆ ಎಲ್ಲಾ ಕಡೆ ಅಭ್ಯರ್ಥಿಗಳನ್ನು ನಿಲ್ಲಿಸಬೇಡಿ ಎಂದಿದ್ದಾರೆ. ಎಲ್ಲಿ ನಮ್ಮ ಅಭ್ಯರ್ಥಿ ಸಮರ್ಥರಿದ್ದಾರೋ ಅಂತಹ 25-30 ಕಡೆ ಮಾತ್ರ ಕಣಕ್ಕೆ ಇಳಿಸಿ ಎಂದಿದ್ದಾರೆ. ಅದರಂತೆ ನಾವು 30 ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿ ಉಳಿದ ಕಡೆಯೂ ಗಮನ ಹರಿಸುತ್ತಿದ್ದೇವೆ. ಏಪ್ರಿಲ್ 16 ರಂದು ಅಭ್ಯರ್ಥಿಗಲಮ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.

ಈ ಬಾರಿ ನಾವು ಯುವ ಸಮೂಹದ ಕಡೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಸದ್ಯ ರಾಜ್ಯದಲ್ಲಿ 2.56 ಕೋಟಿ ಯುವಕರಿದ್ದಾರೆ. 1 ಕೋಟಿ ಜನ ಕೆಲಸ ಬೇಕು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಉದ್ಯೋಗ ಸೃಷ್ಠಿಯ ಭರವಸೆ ನೀಡಿದ್ದ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿವೆ. ಆದರೆ, ನಾವು ಅಧಿಕಾರಕ್ಕೆ ಬಂದರೆ 50 ಲಕ್ಷ ಉದ್ಯೋಗವನ್ನು ಗ್ರಾಮೀಣ ಪ್ರದೇಶದಲ್ಲಿ ಸೃಷ್ಠಿಸಿತ್ತೇವೆ. ಅದಕ್ಕೆ ನೀಲಿ ನಕ್ಷೆ ಸಿದ್ಧಪಡಿಸಿದ್ದೇವೆ ಎಂದರು.

ರಾಜ್ಯದ ಪ್ರಗತಿಗೆ ಪೂರಕವಾದ ಗುಂಪುಗಳು ನಮ್ಮನ್ನು ಬೆಂಬಲಿಸುತ್ತಿವೆ. ಕಡಿದಾಳ್ ಶಾಮಣ್ಣ ಮಾತುಕತೆಗೆ ಆಹ್ವಾನಿಸಿದ್ದಾರೆ. ಲಕ್ಷ್ಮೀನಾರಾಯಣ ಗೌಡ, ಕರ್ನಾಟಕ ಸೇವಾದಳ ಸಂಘಟನೆ ಗುರುದೇವ್ ನಮ್ಮ ಪಕ್ಷಕ್ಕೆ ಬಂದಿದ್ದಾರೆ.

ಉಪೇಂದ್ರ ಗುಂಪು ಸೇರಿದಂತೆ ಬೇರೆ ಬೇರೆ ಗುಂಪುಗಳು ನಮ್ಮ ಸಂಪರ್ಕದಲ್ಲಿ ಇವೆ. ನಾವೇ ಯಾರನ್ನೂ ಹುಡುಕಿಕೊಂಡು‌ ಹೋಗಲ್ಲ. ಪ್ರೀತಿಯ ಮೂಲಕ ಪ್ರಗತಿ ಸಾಧಿಸುವ ಚಿಂತನೆಯ ನಮ್ಮದು. ಎಲ್ಲರನ್ನು ಒಳಗೊಂಡು, ಪ್ರಾಮಾಣಿಕರನ್ನು ಒಟ್ಟಿಗೆ ಸೇರಿಸಿಕೊಂಡು ಮುನ್ನಡೆಯುತ್ತೇವೆ. ಪ್ರಾಮಾಣಿಕ ಕೆಲಸ ಮಾಡುವವರಿಗೆ ಆಹ್ವಾನ ನೀಡುತ್ತಿದ್ದೇನೆ ಎಂದರು.

ರಾಜ್ಯದಲ್ಲಿ ಜೆಡಿಯು ಪಕ್ಷ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ಇಲ್ಲಿ ನಾವು ಎನ್‌ಡಿಎ ಭಾಗವಲ್ಲ. ಹಾಗಾಗಿ ಇಲ್ಲಿ ಬಿಜೆಪಿ ಜೊತೆ ಮಾತುಕತೆ ನಡೆಸಲ್ಲ. ನಾಗಾಲ್ಯಾಂಡ್‌ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಮ್ಮ ಅಭ್ಯರ್ಥಿ ಸಚಿವರಾಗಿದ್ದಾರೆ. ಅದೇ ರೀತಿ ನಾವು ಕರ್ನಾಟಕದಲ್ಲಿ ಮುನ್ನಡೆಯಲಿದ್ದೇವೆ ಎಂದರು.

ಯಾರಿಗೆ ಬೆಂಬಲ ನೀಡಬೇಕು ಎಂದು ಜನರು ಗೊಂದಲದಲ್ಲಿದ್ದಾರೆ. ತಂತ್ರಗಾರಿಕೆ ಮೇಲೆ ಗೆಲ್ಲುವ ಭರವಸೆ ನೀಡುತ್ತಾರೆ ಎನ್ನುವ ಅನುಮಾನ. ರಾಜಕೀಯ ತಿರಸ್ಕಾರ ಜನರಲ್ಲಿ ಬರುತ್ತಿದೆ. ಯಾರು ಕಡಿಮೆ ಕೆಟ್ಟವರು ಎನ್ನುವ ವಿಚಾರ ಜನರಲ್ಲಿ ಬರುತ್ತಿದೆ. ದೇಶದಲ್ಲಿ ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾದ ನಿತೀಶ್ ಕುಮಾರ್ ನೇತೃತ್ವದಲ್ಲಿ ನಾವು ಚುನಾವಣೆಗೆ ಹೊರಟಿದ್ದೇವೆ. ನಾನೂ ಕೂಡ ಜೆಹೆಚ್ ಪಟೇಲ್ ಪುತ್ರ. ಶಾಸಕನಾಗಿ ಕೆಲಸ ಮಾಡಿದ್ದೇನೆ. ಜನರ ಆಶಯ ಈಡೇರಿಸುತ್ತೇನೆ ಎಂದು ಅಭಯ ನೀಡಿದರು.

ನಿತೀಶ್ ಕುಮಾರ್ ಮಾರ್ಗದರ್ಶನದಲ್ಲಿ ರಾಜ್ಯದ ನಾಯಕತ್ವ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಈ ಸರ್ಕಾರ ತನ್ನ ಪ್ರಜ್ಞೆಯ ಮಟ್ಟಕ್ಕೆ ಕೆಲಸ ಮಾಡಿದೆ. ಆದರೆ ಜನ ಬದಲಾವಣೆ ಬಯಸಿದ್ದಾರೆ. ಕುಡುಕ ಡ್ರೈವರ್‌ನನ್ನು ಬಸ್‌ನಿಂದ ಇಳಿಸಿ ಮತ್ತೊಬ್ಬ ಕುಡುಕ ಡ್ರೈವರ್‌ನನ್ನು ಅಲ್ಲಿ ಕೂರಿಸುವುದಲ್ಲ ಎಂದರು.

ಪಕ್ಷದ ಹೆಸರು, ಚಿನ್ಹೆ ಬಳಕೆಗೆ‌ ನಿತೀಶ್ ಕುಮಾರ್ ಮಾತ್ರ ಬಳಸಲು ಹೈಕೋರ್ಟ್, ಚುನಾವಣಾ ಆಯೋಗ ಹೇಳಿದೆ. ಹಾಗಾಗಿ ಪಕ್ಷ ನಮ್ಮದೇ ಆಗಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಶರದ್ ಬಣ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರೂ ನಮಗೇನು ತೊಂದರೆ ಇಲ್ಲ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English