ದೇಶದಲ್ಲೇ ಮೊದಲು… ಮುಂಬೈನ ಎಂಟು ಸ್ಟೇಷನ್‌ಗಳು ಮಹಿಳಾ ಅಧಿಕಾರಿಗಳ ಕೈಯಲ್ಲಿ!

11:10 AM, Wednesday, April 4th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

policeಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿರುವ ಪೊಲೀಸ್‌ ಠಾಣೆಗಳ ಪೈಕಿ ಎಂಟು ಸ್ಟೇಷನ್‌ಗಳಲ್ಲಿ ಮಹಿಳೆಯರೇ ಇನ್‌ಚಾರ್ಜ್‌ ಅಧಿಕಾರಿಗಳಿದ್ದಾರೆ. ಹೀಗಾಗಿ ಮಹಿಳೆಯರೇ ಪೊಲೀಸ್‌ ಠಾಣೆಗಳ ಇನ್‌ಚಾರ್ಜ್‌ ಆಗಿರುವ ದೇಶದ ಮೊದಲ ನಗರವಾಗಿ ಮುಂಬೈ ಹೊರಹೊಮ್ಮಿದೆ.

ಒಂದೇ ನಗರದಲ್ಲಿ ಇಷ್ಟೊಂದು ಪೊಲೀಸ್‌ ಠಾಣೆಗಳಲ್ಲಿ ಅಧಿಕಾರ ಹೊಂದಿದ್ದು ಇದೇ ಮೊದಲಾಗಿದ್ದು, ಇವರಿಗೆ ಹಿರಿಯ ಅಧಿಕಾರಿಗಳು ಸಹ ಸಾಥ್‌ ನೀಡುತ್ತಿದ್ದಾರೆ. ಮಹಿಳಾ ಅಧಿಕಾರಿಗಳ ಕರ್ತವ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮುಂಬೈನ ಅಲ್ಕಾ ಮಂಡವೆಯಲ್ಲಿರುವ ಏರ್‌ಪೋರ್ಟ್‌ ಪೊಲೀಸ್ ಠಾಣೆಯಲ್ಲಿ ರಶ್ಮಿ ಜಾಧವ್, ಕೆಫೆ ಪರೇಡ್ ಪೊಲೀಸ್ ಠಾಣೆಯಲ್ಲಿ ಮೃದುಲಾ ಲಾಡ್‌, ಸಿಯಾನ್ ಪೊಲೀಸ್ ಠಾಣೆಯಲ್ಲಿ ಲತಾ ಶಿರ್ಸಾತ್‌, ಷಹರ್ ಪೊಲೀಸ್ ಠಾಣೆಯಲ್ಲಿ ಜ್ಯೋತ್ಸ್ನಾ ರಾಸಮ್‌, ವನರಾ ಪೊಲೀಸ್ ಠಾಣೆಯಲ್ಲಿ ರೋಹಿಣಿ ಕಾಳೆ, ಪಂತ್‌ನಗರ್ ಪೊಲೀಸ್ ಠಾಣೆಯಲ್ಲಿ ವಿದ್ಯಾಲಕ್ಷ್ಮಿ ಹಿರೇಮಠ, ಆರೆಯಾ ಪೊಲೀಸ್ ಠಾಣೆಯಲ್ಲಿ ಕಲ್ಪನಾ ಗಡೆಕರ್ ಅವರು ಇನ್‌ಚಾರ್ಜ್‌ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English