ಬೆಂಗಳೂರು: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಲು ಕೆಲ ದಿನ ಮಾತ್ರ ಬಾಕಿ ಉಳಿದಿದ್ದು, ಎಲ್ಲ ತಂಡಗಳು ಈಗಾಗಲೇ ಭರ್ಜರಿ ತಯಾರಿಯಲ್ಲಿ ಮಗ್ನವಾಗಿವೆ. ತವರು ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ತಾಲೀಮು ನಡೆಸಿದೆ.
ಈ ಹಿಂದಿನ ಎಲ್ಲ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ರೂ ಇಲ್ಲಿಯವರೆಗೆ ಯಾವುದೇ ಸೀಸನ್‌ನಲ್ಲಿ ಟ್ರೋಫಿಗೆ ಮಾತ್ರ ಮುತ್ತಿಕ್ಕಿಲ್ಲ. ಹೀಗಾಗಿ ಈ ಸಲ ಎಲ್ಲ ರೀತಿಯ ಸವಾಲುಗಳಿಗೂ ಸಜ್ಜುಗೊಂಡಿರುವ ವಿರಾಟ್ ಕೊಹ್ಲಿ ನೇತೃತ್ವದ ಪಡೆ ಈ ಸಲ ಟೂರ್ನಿ ಕೈವಶ ಮಾಡಿಕೊಳ್ಳಲು ಸಖತ್ ತಯಾರುಗೊಂಡಿದೆ.
ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಿರುವ ಕ್ಯಾಪ್ಟನ್ ಕೊಹ್ಲಿ, ಕಳೆದ ಟೂರ್ನಿಯಲ್ಲಿ ಮಾತ್ರ ಗಾಯಗೊಂಡು ಕೆಲ ಪಂದ್ಯಗಳಿಂದ ಹೊರಗುಳಿದಿದ್ದರು. ಆದರೆ ಈ ಬಾರಿ ಈಗಾಗಲೇ ಬೆಂಗಳೂರಿನಲ್ಲಿ ಅಭ್ಯಾಸದಲ್ಲಿ ತಂಡ ನಿರತವಾಗಿದೆ.
ತಂಡದಲ್ಲಿ ಎಬಿ ಡಿವಿಲಿಯರ್ಸ್, ಬ್ರೆಂಡಂ ಮೆಕ್ಕಲಂ, ಕ್ರೀಸ್ ವೋಕ್ಸ್, ಕ್ವಿಂಟನ್ ಡಿಕಾಕ್ ಸೇರಿದಂತೆ ಪ್ರಮುಖರು ಇರುವುದರಿಂದ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ. ಇನ್ನು ಬೌಲಿಂಗ್ ವಿಭಾಗ ಸಹ ಸದೃಡವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯ ತರಬೇತುದಾರ ಡೇನಿಯಲ್ ವೆಟ್ಟೊರಿ, ಈ ಹಿಂದಿಗಿಂತಲೂ ತಂಡ ಅತ್ಯುತ್ತಮವಾಗಿದ್ದು, ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದಿದ್ದಾರೆ.
ಏಪ್ರಿಲ್ 8ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ ತಂಡ ಮೊದಲ ಪಂದ್ಯ ಆಡಲಿದೆ.
Click this button or press Ctrl+G to toggle between Kannada and English