ಯಕ್ಷಗಾನದಲ್ಲಿ ‘ಇವನರ್ವ’ ಪದ ಬಳಕೆ ವಿವಾದ… ಕಲಾವಿದ ಹೇಳಿದ್ದೇನು?

5:59 PM, Wednesday, April 4th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

yakshaganaಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಇತ್ತೀಚೆಗೆ ಬಸವಣ್ಣನವರ ವಚನವನ್ನು ತಪ್ಪಾಗಿ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಅಲ್ಲದೆ, ಇದನ್ನು ಯಕ್ಷಗಾನದಲ್ಲಿ ಬಳಸಿದ್ದು ವಿವಾದಕ್ಕೆ ಕಾರಣವಾಗಿದೆ.

ಇವನರ್ವ ಇವನರ್ವ ಎನ್ನುವ ಹೇಳಿಕೆಯನ್ನು ಯಕ್ಷಗಾನದಲ್ಲಿ ಬಳಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೂಡಬಿದ್ರೆ ಚುನಾವಣಾ ಆಯೋಗ ಮುಜರಾಯಿ ಇಲಾಖೆ ಮೂಲಕ ಕಟೀಲು ದುರ್ಗಾಪರಮೆಶ್ವರಿ ದೇವಸ್ಥಾನದ ಮಂಡಳಿಗೆ ಕಲಾವಿದ ಪೂರ್ಣೇಶರನ್ನು ಯಕ್ಷಗಾನದಲ್ಲಿ ಮುಂದುವರಿಸದಂತೆ ನೋಟೀಸ್ ಜಾರಿಗೊಳಿಸಿದೆ. ಹಾಸ್ಯಕ್ಕೀಡುಮಾಡಿದ ರಾಗಾ ವಚನ ಉವಾಚ…ಯಕ್ಷಗಾನದಲ್ಲೂ ಫುಲ್ ಹಿಟ್!

ಈ ಕುರಿತು ಮಾತನಾಡಿರುವ ಕಲಾವಿದ ಪೂರ್ಣೇಶ್‌, ಚುನಾವಣಾ ಆಯೋಗವು ಇವನರ್ವ ಪದ ಬಳಕೆಗೆ ಸಂಬಂಧಿಸಿದಂತೆ ಎ.1 ರಂದು ಮೂಡಬಿದ್ರೆಯ ಪಡುಮಾರ್ನಾಡುವಿನಲ್ಲಿ ಯಕ್ಷಗಾನದಲ್ಲಿ ಪದ ಬಳಕೆ ಮಾಡಿದೆ ಎಂದು ನೋಟೀಸ್ ನೀಡಿದೆ. ಆದರೆ ಅಂದು ನಾನು ಸುಳ್ಯದ ಬೆಳ್ಳಾರೆಯ ಐವರ್ನಾಡುವಿನ ಯಕ್ಷಗಾನದಲ್ಲಿದ್ದೆ. ಆದರೆ ಅಲ್ಲಿ ಆ ಪದ ಬಳಸಿಲ್ಲ. ಆದರೆ ಮಾ. 24 ರಂದು ಕೇರಳದ ಮಾನ್ಯದಲ್ಲಿ ನಡೆದಿದ್ದ ಯಕ್ಷಗಾನದಲ್ಲಿ ಇವನರ್ವ ಪದ ಬಳಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಮಾ. 24 ಕ್ಕೆ ಚುನಾವಣೆ ಘೋಷಣೆಯಾಗಿರಲಿಲ್ಲ. ಮಾ. 26ಕ್ಕೆ ಚುನಾವಣೆ ಘೋಷಣೆಯಾಗಿತ್ತು. ಅಲ್ಲದೆ ಆ ಕಾರ್ಯಕ್ರಮ ನಡೆದಿರುವುದು ಕೇರಳದಲ್ಲಿ. ಚುನಾವಣಾ ನೀತಿ ಸಂಹಿತೆಯನ್ನು ನಾವು ಉಲ್ಲಂಘಿಸಿಲ್ಲ. ಜೊತೆಗೆ ಎಲ್ಲಿಯೂ ಒಂದು ಪಕ್ಷದ ಪ್ರಚಾರವನ್ನು ಯಕ್ಷಗಾನದ ಮೂಲಕ ಮಾಡಲಾಗಿಲ್ಲ. ಚುನಾವಣಾ ಆಯೋಗದ ನೋಟೀಸ್‌ಗೆ ಉತ್ತರ ನೀಡಲಾಗಿದೆ ಎಂದು ಪೂರ್ಣೇಶ್‌ ವಿವರಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English