ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಕುಂದಾಪುರದ ಗುರುರಾಜ್

10:44 AM, Thursday, April 5th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

gururajಕುಂದಾಪುರ: ಕುಂದಾಪುರದ ಗುರುರಾಜ್ ಪೂಜಾರಿ ಅವರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ 2018ರಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ. ವೇಟ್‌ಲಿಫ್ಟಿಂಗ್‌ನ ಪುರುಷರ 56 ಕೆಜಿ ವಿಭಾಗದಿಂದ ಸ್ಪರ್ಧಿಸಿದ್ದ ಭಾರತದ ಮಂಗಳೂರಿನ ಕುಂದಾಪುರದ ಗುರುರಾಜ್ ಪೂಜಾರಿ ಅವರು ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಂಡು ಬೀಗಿದ್ದಾರೆ.25 ವರ್ಷದ ಗುರುರಾಜ್ ಅವರು ವೈಯಕ್ತಿಕ ಅತ್ಯುತ್ತಮ ಸಾಧನೆಯಾದ 249 (111+134) ಕೆಜಿ ಭಾರ ಎತ್ತುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕಳೆದ ಮೂರು ಬಾರಿ ಚಾಂಪಿಯನ್ ಎನಿಸಿಕೊಂಡಿರುವ ಮಲೇಷಿಯಾದ ಮೊಹಮ್ಮದ್ ಇಜಹಾರ್ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾದ ಲಕ್ಮಲ್ ಚತುರಂಗಾ ಅವರು ಮೂರನೇ ಸ್ಥಾನ ಪಡೆದು ಕಂಚಿಗೆ ತೃಪ್ತಿ ಪಟ್ಟಿದ್ದಾರೆ. ಟ್ರಕ್ ಡ್ರೈವರ್ ಒಬ್ಬರ ಮಗನಾಗಿರುವ ಗುರುರಾಜ್ ಅವರು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

ಈಗ ಭಾರತೀಯ ವಾಯುಸೇನೆಯ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಅತ್ಯಂತ ಬಡ ಕುಟುಂಬದಿಂದ ಬಂದಿರುವ ಗುರುರಾಜ್ ಅವರಿಗೆ ಬೆಳ್ಳಿ ಗೆದ್ದಿರುವುದು ಸಮಾಧಾನ ತಂದಿದೆ. ಈ ಬೆಳ್ಳಿ ನನಗಷ್ಟೆ ಅಲ್ಲ ಕಷ್ಟಗಳನ್ನೇ ಕಂಡಿರುವ ನನ್ನ ಕುಟುಂಬದ ಜೀವನ ಮಟ್ಟ ಸುಧಾರಣೆಗೂ ಸಹಾಯ ಆಗಲಿದೆ ಎಂದು ಭಾವುಕವಾಗಿ ನುಡಿದಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English