ಆಳ್ವಾಸ್ ರೋಸ್ಟ್ರಮ್ ‘ಡೆವಲಪಿಂಗ್ ಮೆಂಟಲ್ ಫ್ಯಾಕಲ್ಟೀಸ್’ ಉಪನ್ಯಾಸ

12:32 PM, Thursday, April 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

alwas-rosdrumಮೂಡುಬಿದಿರೆ: ‘ಜಾಗೃತ ಪ್ರಜ್ಞೆಯನ್ನು ಹೊಂದಿರುವುದು ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದ್ದಂತೆ. ಬುದ್ಧಿ ಮತ್ತು ಮನಸ್ಸುಗಳೆರಡೂ ಸದಾ ಕಾಲ ಜಾಗೃತವಾಗಿದ್ದಲ್ಲಿ, ಅದು ಪ್ರತಿಯೊಬ್ಬರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ’ ಎಂದು ಸೆಂಟರ್ ಫಾರ್ ಕಾನ್ಶಿಯಸ್ ಅವೇರ್‌ನೆಸ್ ಸಂಸ್ಥೆಯ ಸಂಸ್ಥಾಪಕ ಶ್ರೀನಿವಾಸ ಅರ್ಕ ತಿಳಿಸಿದರು.

ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವೇದಿಕೆ ರೋಸ್ಟ್ರಮ್‌ನ ಆಶ್ರಯದಲ್ಲಿ ಎಐಇಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಡೆವಲಪಿಂಗ್ ಮೆಂಟಲ್ ಫ್ಯಾಕಲ್ಟೀಸ್” ಎಂಬ ವಿಷಯದ ಕುರಿತು ಮಾತನಾಡಿದ ಅವರು, “ಬುದ್ಧಿ ಹಲವು ಆಯಾಮಗಳನ್ನು ಹೊಂದಿರುತ್ತದೆ. ಹಾಗಾಗಿ ಬುದ್ಧಿಯನ್ನು ನಮ್ಮ ಸ್ನೇಹಿತನಂತೆ ನಡೆಸಿಕೊಳ್ಳುವುದು ಮುಖ್ಯ. ಸಕಾರಾತ್ಮಕ ಚಿಂತನೆಗಳಿಂದ ಬುದ್ಧಿಯ ಉದ್ದೇಶವನ್ನು ತಿಳಿದುಕೊಳ್ಳಬಹುದು. ಈ ಕಾರಣದಿಂದ ನಿಮ್ಮ ಮನಸ್ಸುಗಳು ಸದಾ ಕಾಲ ಹೊಸ ಆಲೋಚನೆಗಳಿಗೆ ತೆರೆದುಕೊಂಡಿರಲಿ. ತನ್ಮೂಲಕ ನಿಮ್ಮ ಚಿಂತನೆಗಳನ್ನು ವಿಸ್ತರಿಸಿಕೊಳ್ಳಿ” ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.

“ತಾಳ್ಮೆ ಜೀವನದಲ್ಲಿ ಬಹು ಮುಖ್ಯ ಭಾಗ. ನಮ್ಮ ಪ್ರಯತ್ನಗಳು ತಾಳ್ಮೆಯಿಂದ ಕೂಡಿರಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಮಾಡುವ ಕೆಲಸಗಳಲ್ಲಿ ಯಾವುದೇ ರೀತಿಯ ಅಪೇಕ್ಷೆಗಳಿಲ್ಲದೇ, ಉತ್ತಮ ಯೋಚನೆಗಳನ್ನು ಹರಡುತ್ತಾ ಸಾಗಿದರೆ, ಅದು ನಮಗೆ ಒಳ್ಳೆಯ ಪ್ರತಿಫಲವನ್ನೇ ನೀಡುತ್ತದೆ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್ ಮಾತನಾಡಿ “ಬುದ್ಧಿ ಎಂದ ಕೂಡಲೇ ಎಲ್ಲರೂ ಅದರ ಅಸ್ತಿತ್ವದ ಬಗ್ಗೆ ಯೋಚಿಸಲು ಆರಂಭಿಸುತ್ತಾರೆ. ಅದು ಹೇಗೆ ಕಾರ್ಯ ನಿರ್ವಸುತ್ತದೆ ಎಂಬ ತರ್ಕಕ್ಕೆ ನಿಲ್ಲುತ್ತಾರೆ. ಇದು ಮಾನವನ ಎಲ್ಲಾ ಕ್ರಿಯೆಗಳನ್ನು ಪ್ರಭಾವಿಸುವ ಮುಖ್ಯ ಅಂಶ. ನಾವು ಮಾಡುವ ಕೆಲಸವನ್ನು ಹೇಳುತ್ತೇವೋ ಅಥವಾ ಮಾತಿಗೆ ಒಳಗಾಗಿ ಅದರಂತೆ ನಡೆಯುತ್ತೇವೋ ಎಂಬ ದ್ವಂದ್ವ ಎಲ್ಲರನ್ನೂ ಸಹಜವಾಗಿ ಕಾಡುತ್ತದೆ. ಆದರೆ ನಮ್ಮ ಕೆಲಸಗಳು ನಮ್ಮ ಮಾತನ್ನು ಪ್ರತಿಪಾದಿಸಬೇಕು. ಒಂದು ದಿಟ್ಟ ಹೆಜ್ಜೆ ಹೊಸ ಆಲೋಚನೆಗೆ ನಾಂದಿಯಾಗುತ್ತದೆ. ನಮ್ಮ ಬುದ್ಧಿ ಈ ಎಲ್ಲಾ ಪ್ರಕ್ರಿಯೆಗಳ ಮೇಲೆ ಗಮನಹರಿಸುತ್ತದೆ” ಎಂದು ಹೇಳಿದರು.

ರೋಸ್ಟ್ರಮ್ ವಿದ್ಯಾರ್ಥಿ ವೇದಿಕೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ “ರೋಸ್ಟ್ರಮ್ ಒಂದು ಉತ್ತಮ ವೇದಿಕೆಯಾಗಿ ಬೆಳೆಯುತ್ತಿದೆ. ಈವರೆಗೆ ಶ್ರೇಷ್ಠ ಚಿಂತಕರನೇಕರು ವಿದ್ಯಾರ್ಥಿಗಳೊಂದಿಗೆ ತಮ್ಮ ಜ್ಞಾನ ಮತ್ತು ಅನುಭವ ಹಂಚಿಕೊಂಡಿದ್ದಾರೆ. ಇನ್ನು ಮುಂದೆ ಕೇವಲ ಅತಿಥಿ ಉಪನ್ಯಾಸಕರಲ್ಲದೇ, ಇಲ್ಲಿನ ವಿದ್ಯಾರ್ಥಿಗಳೇ ಉಪನ್ಯಾಸ ನೀಡುವಂತಾಗಬೇಕು. ಇದರಿಂದ ವಿದ್ಯಾರ್ಥಿಗಳೇ ಕಟ್ಟಿ ಬೆಳೆಸಿದ ವೇದಿಕೆ ಪ್ರತಿಭಾವಂತ ವಿದ್ಯಾರ್ಥಿಗಳ ಚಿಂತನೆಗೂ ನೆಲೆ ಒದಗಿಸುತ್ತದೆ” ಎಂದು ತಿಳಿಸಿದರು. ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ ಅಶ್ವಿನಿ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಸೆಂಟರ್ ಫಾರ್‌ಕಾನ್ಶಿಯಸ್‌ಅವೇರ್‌ನೆಸ್ ಸಂಸ್ಥೆಯ ಮನೋತಜ್ಞರು, ಆಳ್ವಾಸ್ ನ್ಯಾಚುರೋಪತಿ ಆ್ಯಂಡ್‌ಯೋಗಿಕ್ ಸೈನ್ಸ್‌ನ ಪ್ರಾಂಶುಪಾಲೆ ವನಿತಾ ಶೆಟ್ಟಿ ಉಪನ್ಯಾಸಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English