ರಾಜ್ಯದ ಶ್ರೀಮಂತ ಮಹಿಳೆ ಅನಿತಾ ಕುಮಾರಸ್ವಾಮಿ

10:44 PM, Tuesday, October 4th, 2011
Share
1 Star2 Stars3 Stars4 Stars5 Stars
(4 rating, 4 votes)
Loading...

Anita Kumaraswamy

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿಯವರು 2010-11ನೇ ಸಾಲಿಗೆ ಆಸ್ತಿ ವಿವರಗಳ ಅಫಡವಿಟ್ ಸಲ್ಲಿಸಿರುವ ಪ್ರಕಾರ ಒಟ್ಟು ಅಧಿಕೃತ ಆಸ್ತಿ ಮೊತ್ತ 160 ಕೋಟಿ ರುಪಾಯಿ. ಶಾಸಕಿಯಾಗಿ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರ ದಾಖಲೆಗಳನ್ನು ಪರಿಶೀಲಿಸಿದಾಗ ಈ ಅಂಶ ದೃಢಪಟ್ಟಿದೆ. ಇಲ್ಲಿ ಒಂದು ಅಂಶ ಸ್ಪಷ್ಟಪಡಿಸುವುದಾದರೆ ಬಳ್ಳಾರಿಯ ಜನಾರ್ಧನ ರೆಡ್ಡಿ ಅಧಿಕೃತ ಆಸ್ತಿ ಲೋಕಾಯಯುಕ್ತ ದಾಖಲೆಗಳ ಪ್ರಕಾರ ಕೇವಲ 144 ಕೋಟಿ ರು.

2009-10ರಲ್ಲಿ ಶಾಸಕಿ ಅನಿತಾರ ಆಸ್ತಿ ಮೊತ್ತ 51.22 ಕೋಟಿ ರು. ಆದರೆ 2010-11ನೇ ಸಾಲಿಗೆ ಈ ಮೊತ್ತ ದಿಢೀರನೆ 160 ಕೋಟಿ ರು. ಗೆ ಜಿಗಿದಿದೆ. ಅದರಲ್ಲಿ 1,300 ಗ್ರಾಂ ಚಿನ್ನ, 40 ಕ್ಯಾರೆಟ್ ವಜ್ರ, 17 ಕೆಜಿ ಬೆಳ್ಳಿ ಅನಿತಾ ಹೆಸರಿನಲ್ಲಿದೆ. ಜತೆಗೆ, 37,98,84,667 ರುಪಾಯಿ ಸಾಲದ ಹೊರೆಯನ್ನೂ ಈ ಜಾತ್ಯತೀತ ಜನತಾದಳದ ನಾಯಕಿ ಹೊತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English