ಮಂಗಳೂರು: ‘ಮಿಸ್ ವರ್ಲ್ಡ್’ ಸೌಂದರ್ಯ ಪ್ರಶಸ್ತಿ ವಿಜೇತೆ, ಮಾನುಷಿ ಚಿಲ್ಲರ್ ಅವರು ವಿಶ್ವದ ಪ್ರಮುಖ ಚಿನ್ನಾಭರಣ ಸಮೂಹಗಳಲ್ಲೊಂದಾದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಇದರ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿನಿಯಾದ 21 ವರ್ಷದ ಮಾನುಷಿ ಚಿಲ್ಲರ್ ಕಳೆದ ವರ್ಷದ ನವೆಂಬರ್‌ನಲ್ಲಿ ಮಿಸ್‌ವರ್ಲ್ಡ್ ಪ್ರಶಸ್ತಿ ಗೆದ್ದಿದ್ದರು. ಮಾನುಷಿ ಮಿಸ್ವರ್ಲ್ಡ್ ಪುರಸ್ಕಾರ ಗೆದ್ದ ಭಾರತದ ಆರನೆ ಮಹಿಳೆಯಾಗಿದ್ದಾರೆ.
ಮಿಸ್‌ವರ್ಲ್ಡ್ ಪಟ್ಟ ಆಲಂಕರಿಸುವುದಕ್ಕಿಂತ ಬಹಳ ಸಮಯ ಮೊದಲೇ ಮಾನುಷಿ, ಮಾನವೀಯ ಸೇವಾ ಚಟುವಟಿಕೆಗಳಲ್ಲಿಯೂ ತನ್ನನ್ನು ತೊಡಗಿಸಿ ಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಜನತೆಯ ಬದುಕನ್ನು ಉತ್ತಮಗೊಳಿಸಬೇಕೆಂಬ ಹಂಬಲವನ್ನು ಮಲಬಾರ್ ಗೋಲ್ಡ್ ಹಾಗೂ ಮಾನುಷಿ ಹೊಂದಿರುವುದಾಗಿ, ಮಲಬಾರ್ ಗೋಲ್ಡ್‌ನ ನಿರ್ದೇಶಕ ಎಂ.ಪಿ.ಅಹ್ಮದ್ ಹೇಳಿದ್ದಾರೆ.
ಮಲಬಾರ್ ಗೋಲ್ಡ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿರುವುದಕ್ಕೆ ಮಾನುಷಿ ಚಿಲ್ಲರ್ ಸಂತಸ ವ್ಯಕ್ತಪಡಿಸಿದ್ದಾರೆ. ಮಲಬಾರ್ ಗೋಲ್ಡ್ ಸಂಸ್ಥೆಯ ಜೊತೆಗಿನ ತನ್ನ ಬಾಂಧವ್ಯವು ಹೃದಯಕ್ಕೆ ತುಂಬಾ ನಿಕಟವಾಗಿದೆ ಎಂದವರು ಹೇಳಿದ್ದಾರೆ.
ಕವಯತ್ರಿ, ಪೈಂಟರ್ ಹಾಗೂ ಕೂಚುಪಡಿ ನೃತ್ಯ ಕಲಾವಿದೆಯೂ ಆಗಿರುವ ಮಾನುಷಿ ಚಿಲ್ಲರ್ ಹೃದಯದ ಸರ್ಜನ್ ಆಗಲು ಇಚ್ಛಿಸಿದ್ದು, ಜನತೆಗಾಗಿ ಸೇವೆ ಸಲ್ಲಿಸಲು ಬಯಸಿದ್ದಾರೆ. ವಿಶಿಷ್ಟ ವಿನ್ಯಾಸಗಳು ಹಾಗೂ ಗುಣಮಟ್ಟದ ಉತ್ಪನ್ನ ಗಳಿಂದ ಮಲಬಾರ್ ಗೋಲ್ಡ್ ಬದುಕಿ ಸೌಂದರ್ಯ ವನ್ನು ಸಂಭ್ರಮಿಸುತ್ತಿದೆ.
ಗ್ರಾಹಕರ ಸೇವೆಯೇ ಕೇಂದ್ರ ಬಿಂದುವಾಗಿರು ಮಲಬಾರ್ ಗೋಲ್ಡ್‌ನ ಮೂಲಭೂತ ತತ್ವಕ್ಕೆ ಮಿಸ್‌ವರ್ಲ್ಡ್ ಮಾನುಷಿ ಚಿಲ್ಲರ್ ಅವರು ಪರಿಪೂರ್ಣವಾಗಿ ಹೊಂದಿಕೆಯಾಗುತ್ತಾರೆ ಎಂದು ಅಹ್ಮದ್ ತಿಳಿಸಿದ್ದಾರೆ.
ಜಗತ್ತಿನ ಐದು ಉನ್ನತ ಜ್ಯುವೆಲ್ಲರಿ ಬ್ರಾಂಡ್‌ಗಳಲ್ಲೊಂದಾದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ, ಜಾಗತಿಕ ಪ್ರಚಾರ ಅಭಿಯಾನಗಳಿಗೆ ಹಾಗೂ ಸೇವಾ ಚಟುವಟಿಕೆಗಳಿಗೆ ಮಾನುಷಿ ಚಿಲ್ಲರ್ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ತೀರಾ ಇತ್ತೀಚೆಗೆ ಮಲಬಾರ್ ಗೋಲ್ಡ್ ಒಂದೇ ಸಮಯದಲ್ಲಿ ಆರು ದೇಶಗಳಲ್ಲಿ ತನ್ನ 11 ಶೋರೂಂ ಗಳನ್ನು ಆರಂಭಿಸಿದೆ. ಜಾಗತಿಕ ಮಟ್ಟದಲ್ಲೂ ತನ್ನ ಉಪಸ್ಥಿತಿಯನ್ನು ವಿಸ್ತರಿಸುವ ಹಾಗೂ ಇನ್ನೂ ಹೊಸ ಪ್ರಾಂತಗಳನ್ನು ಪ್ರವೇಶಿಸುವ ಹಾಗೂ ಈ ವರ್ಷ 50ಕ್ಕೂ ಅಧಿಕ ಶೋರೂಂಗಳನ್ನು ತೆರೆಯುವ ಗುರಿಯನ್ನು ಹೊಂದಿದೆ.
ಭಾರತ, ಸಿಂಗಾಪುರ, ಮಲೇಶ್ಯ ಹಾಗೂ ಯುಎಇ, ಒಮನ್, ಕತರ್, ಬಹರೈನ್, ಕುವೈತ್ ಹಾಗೂ ಸೌದಿ ಅರೇಬಿಯ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಮಲಬಾರ್ ಗೋಲ್ಡ್ ತನ್ನ ಶೋರೂಂಗಳನ್ನು ಹೊಂದಿದೆ.
Click this button or press Ctrl+G to toggle between Kannada and English