ಮಂಗಳೂರು: ಕಾಟಿಪಳ್ಳದಲ್ಲಿ ಹಿಂದೂ ಸಂಘಟನೆಯ ದೀಪಕ್ ರಾವ್ ಹತ್ಯೆ ನಡೆದ ಜ. 3 ರಂದು ರಾತ್ರಿ ನಗರದ ಕೊಟ್ಟಾರ ಚೌಕಿಯಲ್ಲಿ ಹೋಟೆಲ್ ಮಾಲೀಕ ಆಕಾಶಭವನದ ಬಶೀರ್ ಕೊಲೆ ಪ್ರಕರಣ ಕುರಿತಂತೆ 11 ಮಂದಿ ವಿರುದ್ಧ ಪೊಲೀಸರು ಮಂಗಳೂರಿನ 3 ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಎಸಿಪಿ ವೆಲೆಂಟೈನ್ ಡಿಸೋಜ ಅವರು ಆರಂಭದಲ್ಲಿ ಈ ಪ್ರಕರಣದ ತನಿಖಾಧಿಖಾರಿಯಾಗಿದ್ದು ನಂತರ ಎಸಿಪಿ ರಾಜೇಂದ್ರ ಕುಮಾರ್ ಅವರು ತನಿಖೆಯನ್ನು ಪೂರ್ತಿಗೊಳಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಬಶೀರ್ ಅವರನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟು 11 ಮಂದಿ ಆರೋಪಿಗಳ ಪೈಕಿ 10 ಮಂದಿ ಬಂಧನವಾಗಿದ್ದು ಇನ್ನೋರ್ವ ಆರೋಪಿಯನ್ನು ಬಂಧಿಸಬೇಕಿದೆ.
ಆರೋಪಿಗಳೆಂದು ಪಿ.ಕೆ ಶ್ರಿಜಿತ್, ಸಂದೇಶ್ ಕೋಟ್ಯಾನ್, ಧನುಷ್ ಪೂಜಾರಿ, ಕಿಶನ್ ಪೂಜಾರಿ, ಕಾಸರಗೋಡಿನ ಲತೀಶ್, ಪುಷ್ಪರಾಜ್ ಆಚಾರ್ಯ, ಮಿಥುನ್ ಕಲ್ಲಡ್ಕ, ತಿಲಕ್ ರಾಜ್ ಶೆಟ್ಟಿ, ರಾಜು ಯಾನೆ ರಾಜೇಶ, ಅನೂಪ್ ಹಾಗೂ ಮನೋಜ್ ಕೋಡಿಕೆರೆ ಎಂಬುವರ ಹೆಸರನ್ನು ಚಾರ್ಜ್ ಶೀಟ್‌ನಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
Click this button or press Ctrl+G to toggle between Kannada and English