ನೂತನವಾಗಿ ನಿರ್ಮಾಣವಾದ ಕೊಳವೆ ಬಾವಿ ಉದ್ಘಾಟನಾ ಕಾರ್ಯಕ್ರಮ

12:51 PM, Saturday, April 7th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

kolavebaviಮಂಗಳೂರು: ದಿನಾಂಕ 06-04-2018ನೇ ಶುಕ್ರವಾರ ಶ್ರೀ ಧ.ಮಂ.ಅ.ಹಿ.ಪ್ರಾಥಮಿಕ ಶಾಲೆ ಪುದುವೆಟ್ಟುವಿನಲ್ಲಿ ನೂತನವಾಗಿ ನಿರ್ಮಾಣವಾದ ಕೊಳವೆ ಬಾವಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟನೆ ಮಾಡಲಾಯಿತು.

ಕೊಳವೆ ಬಾವಿಯ ಉದ್ಘಾಟನೆಯನ್ನು ಪೆಟ್ರೋನೆಟ್ ಎಂ.ಎಚ್.ಬಿ. ಲಿಮಿಟೆಡ್‌ನ ವ್ಯವಸ್ಥಾಪಕರಾದ ಶ್ರೀ ರವೀಂದ್ರ ತಾಪಸ್‌ರವರು ಮಾಡಿದರು. ಶುದ್ಧ ಕುಡಿಯುವ ನೀರಿನ ಘಟಕವನ್ನು ಶ್ರೀ ಶಶಿಧರ್ ಶೆಟ್ಟಿ ಕಾರ್ಯನಿರ್ವಾಹಣಾಧಿಕಾರಿ ಎಸ್.ಡಿ.ಎಂ. ಎಜ್ಯುಕೇಶನ್ ಸೊಸೈಟಿ ಅವರು ನೆರವೇರಿಸಿದರು. ವೇದಿಕೆಯಲ್ಲಿ ಡಿ.ಎಂ.ಸಿ.ಯ ಎಂಜಿನಿಯರ್ ಯಶೋಧರ್, ಸಿ.ಆರ್.ಪಿ.ಯಾದ ವೆಂಕಟಗಿರಿ ಹೊಳ್ಳ, ಎಸ್.ಎಂ.ಎಸ್. ಅನುದಾನಿತ ಪ್ರಾಥಮಿಕ ಶಾಲೆ, ಧರ್ಮಸ್ಥಳದ ಮುಖ್ಯೋಪಾಧ್ಯಾಯರಾದ ಶ್ರೀ ಸುಬ್ರಹ್ಮಣ್ಯ ರಾವ್ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಡಿ. ವಸಂತ್ ಭಟ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರೋಯಿ ಜೋಸೆಫ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಗಫೂರ್ ಸಾಹೇಬ್ ಉಪಸ್ಥಿತರಿದ್ದರು.

ಕೊಳವೆ ಬಾವಿ ಉದ್ಘಾಟನೆ ಮಾಡಿ ಮಾತನಾಡಿದ ಶ್ರೀ ರವೀಂದ್ರ ತಾಪಸ್‌ರವರು ಮಕ್ಕಳೆಂದರೆ ದೇವರ ಸ್ವರೂಪ, ಇಂತಹ ಮಕ್ಕಳಿಗಾಗಿ ನಮ್ಮ ಸಂಸ್ಥೆಯಿಂದ ಇನ್ನೂ ಅನೇಕ ಸವಲತ್ತುಗಳನ್ನು ಒದಗಿಸಿಕೊಡುವುದೇ ನನ್ನ ಮೂಲ ಉದ್ದೇಶ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶ್ರೀ ರವೀಂದ್ರ ತಾಪಸ್‌ರವರನ್ನು ಸನ್ಮಾನಿಸಲಾಯಿತು.

ವೆಂಕಟಗಿರಿ ಹೊಳ್ಳ ಮಾತನಾಡಿ ದೇಶದ ಮುಂದಿನ ಉತ್ತಮ ಪ್ರಜೆಗಳಿಗಾಗಿ ಮಕ್ಕಳು ರೂಪುಗೊಳ್ಳಬೇಕು. ಎಂದು ತಿಳಿಸಿದರು. ಶ್ರೀಯುತ ಸುಬ್ರಹ್ಮಣ್ಯರಾವ್ ಮಾತನಾಡಿ ಪುದುವೆಟ್ಟು ಶಾಲೆಯಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ರೋಯಿ ಜೋಸೆಫ್ ಮಾತನಾಡಿ ಬಹಳ ವರ್ಷಗಳಿಂದ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದ ಈ ಶಾಲೆಗೆ ಕೊಳವೆ ಬಾವಿ ನಿರ್ಮಾಣ ಮಾಡಿ ಕೊಟ್ಟ ಎಂ.ಎಚ್.ಬಿ. ಪೆಟ್ರೋನೆಟ್ ಕಂಪೆನಿಯ ವ್ಯವಸ್ಥಾಪಕರಿಗೆ ಅಭಿನಂದನೆ ಸಲ್ಲಿಸಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಡಿ. ವಸಂತ ಭಟ್‌ರವರು ಪ್ರಾಸ್ತಾವಿಕ ಮಾತಿನಲ್ಲಿ ಶುದ್ಧವಾದ ಕುಡಿಯುವ ನೀರಿನ ಘಟಕದ ಬಗ್ಗೆ ಮಾತನಾಡಿ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಶಾಲೆಯಲ್ಲಿ ಶುದ್ಧವಾದ ಕುಡಿಯುವ ನೀರಿನ ಘಟಕ ಆರಂಭವಾಗಿರುವುದರಿಂದ ಶಾಲೆಯಲ್ಲಿ ಯಾವುದೇ ವಿದ್ಯಾರ್ಥಿ ಕೂಡ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ತರಬಾರದು, ಶಾಲೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಬೇಕು ಎಂದು ತಿಳಿಸಿದ್ದು, ಈ ಮಾತನ್ನು ಪ್ರಾಸ್ತಾವಿಕ ನುಡಿಯಲ್ಲಿ ಒತ್ತಿ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಶಶಿಧರ್ ಶೆಟ್ಟಿಯವರು ಶಾಲೆಯಲ್ಲಿ ಚಟುವಟಿಕೆ ಆಧಾರಿತ ಕಲಿಕೆ ಆಗುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಊರವರ ಸಹಕಾರದಿಂದ ಉತ್ತಮ ರೀತಿಯಲ್ಲಿ ಕಲಿಕೆಯ ವಾತಾವರಣದಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಶಾಲೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ನುಡಿದರು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಡಿ. ವಸಂತ ಭಟ್‌ರವರು ಸ್ವಾಗತಿಸಿದರು. ಶ್ರೀ ಜೋಸೆಫ್ ಪಿ.ಎಂ. ರವರು ಧನ್ಯವಾದವಿತ್ತರು. ಶ್ರೀ ನಿಶಾಂತ್ ಕುಮಾರ್‌ರವರು ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English