ಮಂಗಳೂರು: ಭಾರತದ 12 ಪ್ರಮುಖ ಬಂದರುಗಳ ಪೈಕಿ ನವ ಮಂಗಳೂರು ಬಂದರು ಟ್ರಸ್ಟ್ (ಎನ್‌ಎಂಪಿಟಿ) ಅತ್ಯಂತ ಸ್ವಚ್ಛ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸ್ವಚ್ಛ ಭಾರತ್ ಅಭಿಯಾನದಡಿ ಬಂದರು ಹಾಗೂ ಅದರ ಪರಿಸರವನ್ನು ಅತ್ಯಂತ ನಿರ್ಮಲ ಹಾಗೂ ಹಸಿರಾಗಿಡುವಲ್ಲಿ ಎನ್‌ಎಂಪಿಟಿ ನಂ. 1 ಸ್ಥಾನದಲ್ಲಿದೆ ಎಂದು ಕೇಂದ್ರ ಶಿಪ್ಪಿಂಗ್ ಸಚಿವಾಲಯ ನೇಮಿಸಿದ್ದ ಸ್ವತಂತ್ರ ಸಮಾಲೋಚಕ ಸಂಸ್ಥೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಪ್ರಕಟಿಸಿದೆ.
2017-18ನೇ ಸಾಲಿನಲ್ಲಿ ಸ್ವಚ್ಛ ಭಾರತ್ ಅಭಿಯಾನದಡಿ ಶಿಪ್ಪಿಂಗ್ ಸಚಿವಾಲಯವು ದೇಶದ ಪ್ರಮುಖ ಬಂದರುಗಳಲ್ಲಿ 37 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನಿರ್ಧರಿಸಿತ್ತು. ಎನ್‌ಎಂಪಿಟಿಯು, ಕಾರ್ಯನಿರ್ವಹಣಾ ಪ್ರದೇಶಗಳ ಸ್ವಚ್ಛತೆ, ಶೆಡ್‌ಗಳು, ಕಚೇರಿ ಕಟ್ಟಡಗಳು, ವಸತಿ ಪ್ರದೇಶಗಳ ಸ್ವಚ್ಛತೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅತ್ಯುತ್ಕೃಷ್ಟವಾದ ನಿರ್ವಹಣೆಯನ್ನು ಪ್ರದರ್ಶಿಸಿದೆ.
ಈ ಎಲ್ಲಾ ನಿಗದಿತ ಅಂಶಗಳ ಮೌಲ್ಯಮಾಪನ ಮಾಡಿರುವ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ 2017-18 ರ ಸ್ವಚ್ಛ ಭಾರತ್ ಅಭಿಯಾನದಲ್ಲಿ ಭಾರತದ ಬಂದರುಗಳ ಪೈಕಿ ಎನ್‌ಎಂಪಿಟಿಗೆ ಸ್ವಚ್ಛತೆಯಲ್ಲಿ ನಂ. 1 ಸ್ಥಾನ ನೀಡಿದೆ.
Click this button or press Ctrl+G to toggle between Kannada and English