ಬೆಂಗಳೂರು: ಪಕ್ಷದ ವರಿಷ್ಠರು ನೀಡಿದ ಗಡುವನ್ನೂ ಉಲ್ಲಂಘಿಸಿದ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಈವರೆಗೆ ತಮ್ಮ ನಿಲುವು ತಿಳಿಸಿಲ್ಲ. ಅಲ್ಲದೇ ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಬಗ್ಗೆ ಯಾವುದೇ ತೀರ್ಮಾನ ಪ್ರಕಟಿಸಲು ನಿನ್ನೆ ಸಂಜೆ 4 ಗಂಟೆಯವರೆಗೆ ಪಕ್ಷ ಅವರಿಗೆ ಗಡುವು ನೀಡಿತ್ತು. ಸಂಜೆಯೊಳಗೆ ನಿರ್ಧಾರ ತಿಳಿಸಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಸೂಚಿಸಿದ್ದರು. ಆದರೆ ಈ ಗಡುವಿಗೆ ಉತ್ತರ ನೀಡದ ಅಂಬರೀಶ್, ಪಕ್ಷ ಬಯಸಿದರೆ ಮಂಡ್ಯದಿಂದ ಮತ್ತೆ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಇಲ್ಲ ಎಂದಿದ್ದಾರೆ.
ಇತ್ತೀಚೆಗೆ ಹೈದರಾಬಾದ್‌ನಲ್ಲಿ ಅಂಬರೀಶ್ ಅವರು ಬಿಜೆಪಿ ಮಾಜಿ ಸಚಿವ ಕೃಷ್ಣಂರಾಜು ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಇದರಿಂದ ಅಂಬರೀಶ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಕಾಂಗ್ರೆಸ್ ನನಗೆ ಎಲ್ಲವನ್ನೂ ನೀಡಿದೆ. ರಾಜಕೀಯದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದೇನೆ. ಆದರೆ ಇಲ್ಲಿ ಎಲ್ಲ ಗೌರವ, ಸ್ಥಾನಮಾನ ಸಿಕ್ಕಿರುವುದರಿಂದ ಪಕ್ಷಕ್ಕೆ ವಿದಾಯ ಹೇಳುವುದಿಲ್ಲ ಎಂದು ಮುಖಂಡರಿಗೆ ನಿನ್ನೆ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗ್ತಿದೆ.
ಮಂಡ್ಯದಿಂದ ಸ್ಪರ್ಧಿಸುವ ಬಗ್ಗೆ ಪಕ್ಷದ ನಿರ್ಧಾರಕ್ಕೆ ಬಿಡುವುದಾಗಿ ಅಂಬರೀಶ್ ಹೇಳಿದ್ದು, ಇಂದು ನವದೆಹಲಿಯಲ್ಲಿ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯುವುದರೊಳಗೆ ಅಭಿಪ್ರಾಯ ತಿಳಿಸುವಂತೆ ಪಕ್ಷದ ಹೈಕಮಾಂಡ್ ಸೂಚನೆ ನೀಡಿತ್ತು. ಆದ್ರೆ ಅಂಬರೀಶ್ ಇದಕ್ಕೂ ಮೌನವಾಗಿರುವುದು ಕುತೂಹಲ ಮೂಡಿಸಿದೆ.
Click this button or press Ctrl+G to toggle between Kannada and English