ಮಂಗಳೂರು: ಕರಾವಳಿ ಬಹುಸಂಸ್ಕೃತಿಯುಳ್ಳ ಪ್ರದೇಶ. ಆದರೆ ದೇಶದ ಸಂಸ್ಕೃತಿ ಗೊತ್ತಿಲ್ಲದವರು ಮಾತ್ರ ಅಂತಹ ಹೇಳಿಕೆ ನೀಡ್ತಾರೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಸಚಿವ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ.
ಸಚಿವ ಯು.ಟಿ. ಖಾದರ್ ಅವರು ಹೋದ ದೇವಾಲಯಗಳಿಗೆಲ್ಲ ಮತ್ತೆ ಬ್ರಹ್ಮಕಲಶವಾಗಬೇಕು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ನೀಡಿದ್ದ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಖಾದರ್, ಕರಾವಳಿ ಬಹುಸಂಸ್ಕೃತಿಯುಳ್ಳ ಪ್ರದೇಶ. ನಾನು ಯಾವ ಕ್ಷೇತ್ರಗಳಿಗೆ ಹೋಗಬೇಕು, ಬೇಡ ಎನ್ನುವುದನ್ನು ಕ್ಷೇತ್ರದ ಜನತೆ, ಸಮಾಜದ ಮುಖಂಡರು ಆ ಬಗ್ಗೆ ನಿರ್ಧರಿಸುತ್ತಾರೆ. ನನ್ನನ್ನು ಸಮಾಜದ ವಿವಿಧ ವರ್ಗದ ಜನರೇ ಆದರದಿಂದ ಕರೆಯುತ್ತಾರೆ. ಇಂಥ ಮಾತಿನಿಂದ ಯಾವುದೇ ರಾಜಕೀಯ ನಿರ್ಧಾರ ಸಾಧ್ಯವಾಗಲ್ಲ ಎಂದು ಹೇಳಿದರು.
Click this button or press Ctrl+G to toggle between Kannada and English