ಬೆಂಗಳೂರು : ಭ್ರಷ್ಟಚಾರ ವಿರುದ್ಧ ಎಲ್. ಕೆ. ಅಡ್ವಾಣಿ ಕೈಗೊಳ್ಳಲಿರುವ ‘ಜನಚೇತನ ಯಾತ್ರೆ’ಯು ಅಕ್ಟೋಬರ್ 11ರಿಂದ ಜಯಪ್ರಕಾಶ್ ನಾರಾಯಣ್ ಅವರ ಹುಟ್ಟೂರಾದ ಸಿತಾಬ್ದಿಯಾರಾದಿಂದ ಆರಂಭವಾಗಲಿದೆ ರಥಯಾತ್ರೆಗೆ ಬಿಹಾರ ಮುಖಮಂತ್ರಿ ನಿತೀಶ್ ಕುಮಾರ್ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಎಚ್. ಅನಂತ್ ಕುಮಾರ್ ತಿಳಿಸಿದ್ದಾರೆ.
ಜನಚೇತನ ಯಾತ್ರೆಯ ದೇಶದ 23 ರಾಜ್ಯಗಳಲ್ಲಾಗಿ ಒಟ್ಟು 7,600 ಕೀ. ಮೀ. ಸಂಚರಿಸಲಿದೆ ಎಂದು ಬುಧವಾರ ಬಿಜೆಪಿ ಸಂಸದ ಅನಂತ್ ಕುಮಾರ್ ತಿಳಿಸಿದ್ದಾರೆ, ಇದರ ಮುಖ್ಯ ಉದ್ದೇಶ ಉತ್ತಮ ಆಡಳಿತ ಹಾಗೂ ಕಳಂಕ ರಹಿತ ರಾಜಕೀಯವಾಗಿದೆಯಂತೆ.
ಜನಚೇತನ ಯಾತ್ರೆ ನವೆಂಬರ್ 20ರಂದು ರಾಷ್ಟ್ರರಾಜಧಾನಿಯಾದ ದೆಹಲಿಯಲ್ಲಿ ಕೊನೆಗೊಳ್ಳಲಿದೆ. ಈ ಯಾತ್ರೆಯು ದೇಶದಲ್ಲಿ ನೂತನ ಬದಲಾವಣೆಗೆ ಕಾರಣವಾಗಲಿದೆ ಎಂದು ಅನಂತ್ ಕುಮಾರ್ ಭವಿಷ್ಯ ಹೇಳಿದ್ದಾರೆ. ಈ ಹಿಂದೆಯೂ ಅಡ್ವಾಣಿ ಅವರು ಆರು ಬಾರಿ ರಥಯಾತ್ರೆ ಕೈಗೊಂಡಿದ್ದಾರೆ. ಪ್ರತಿ ಬಾರಿಯೂ ಒಂದಲ್ಲ ಒಂದು ರೀತಿಯಲ್ಲಿ ನೂತನ ಬದಲಾವಣೆಗೆ ಕಾರಣವಾಗಿದೆ. ಹಾಗೆಯೇ ಈ ಬಾರಿಯೂ ಹೊಸ ಯೋಚನೆಗೆ ಕಾರಣವಾಗಲಿದೆ ಎಂದರು.
Click this button or press Ctrl+G to toggle between Kannada and English