ಬಂಟ್ವಾಳ : ಮೇ.12 ರಂದು ನಡೆಯುವ ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭದ್ರತೆಯ ಅಂಗವಾಗಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕೋಮು ಸೂಕ್ಷ್ಮ ಪ್ರದೇಶ ವಾದ ಕಲ್ಲಡ್ಕದಲ್ಲಿ ಸುರಕ್ಷಾ ಸೀಮಾ ಬಲ ತುಕುಡಿ ಮತ್ತು ಬಂಟ್ವಾಳ ಪೊಲೀಸರು ಪ್ಲಾಗ್ ಮಾರ್ಚ್ ಶನಿವಾರ ನಡೆಸಿದರು.
ಅಕರ್ಷಣೆಗಾಗಿ ವಿಶೇಷವಾಗಿ ಬ್ಯಾಂಡ್, ವಾದ್ಯ ಮೇಳವು ಜೊತೆಯಲ್ಲಿ ಸಾಗಿತ್ತು. ಕೆ.ಸಿ.ರೋಡಿನಿಂದ ಹೊರಟು ಕಲ್ಲಡ್ಕ ಪೇಟೆಯಾಗಿ ಗೋಳ್ತಮಜಲು ವರೆಗೆ ಸಾಗಿ ವಾಪಾಸು ಕಲ್ಲಡ್ಕ ಕ್ಕೆ ಮಾರ್ಚ್ ನಡೆಸಿದರು.
ಸುರಕ್ಷಾ ಸೀಮಾ ಬಲದ ಕಮಾಂಡ್ ದೀರಜ್ ಸಹ, ಅಡಿಸನಲ್ ಎಸ್. ಪಿ.ಸಜಿತ್, ಪ್ರೋಬೆಸನರಿ IPS ಎಮ್ ಹಾಕೆ, ಡಿ.ವೈ.ಎಸ್.ಪಿ.ಶ್ರೀ ನಿವಾಸ್, ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಕುಮಾರ್, ನಗರ ಠಾಣಾ ಎಸ್.ಐ.ಚಂದ್ರಶೇಖರ್, ಅಪರಾಧ ವಿಭಾಗದ ಎಸ್.ಐ.ಹರೀಶ್, ಟ್ರಾಫಿಕ್ ಪೋಲೀಸ್ ಎಸ್. ಐ.ಯಲ್ಲಪ್ಪ, ಮತ್ತು ಬಂಟ್ವಾಳ ಸರ್ಕಲ್ ನ ಎಲ್ಲಾ ಪೋಲೀಸ್ ಸಿಬ್ಬಂದಿ ಗಳು ಭಾಗವಹಿಸಿದ್ದ ರು. ಒಟ್ಟು 100 ಜನ ಸುರಕ್ಷಾ ಸೀಮಾ ಬಲದ ಸಿಬ್ಬಂದಿ ಹಾಗೂ 80 ಮಂದಿ ಪೊಲೀಸ್ ಸಿಬ್ಬಂದಿ ಗಳು ಭಾಗವಹಿಸಿದ್ದರು
Click this button or press Ctrl+G to toggle between Kannada and English