ಎಟಿಎಂಗಳಲ್ಲಿ ಸಿಗದ ಹಣ: ಕೇಂದ್ರ ಸಚಿವ ಜೇಟ್ಲಿ ಹೇಳಿದ್ದೇನು?

6:08 PM, Tuesday, April 17th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

arun-jetlyನವದೆಹಲಿ: ಎಟಿಎಂಗಳಲ್ಲಿ ಎದುರಾಗಿರುವ ಹಣದ ಸಮಸ್ಯೆ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಪ್ರತಿಕ್ರಿಯಿಸಿದ್ದು, ಇದೊಂದು ತಾತ್ಕಾಲಿಕ ಕೊರತೆ ಎಂದಿದ್ದಾರೆ.

ದೇಶದ ಹಲವು ಭಾಗಗಳಲ್ಲಿ ಎಟಿಎಂಗಳಲ್ಲಿ ಹಣ ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ದೆಹಲಿ, ಉತ್ತರ ಪ್ರದೇಶ, ಗುಜರಾತ್‌, ಬಿಹಾರ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಹಣದ ಸಮಸ್ಯೆ ಎದುರಾಗಿದ್ದು, ಎಟಿಎಂಗಳಲ್ಲಿ ‘ನೋ ಕ್ಯಾಶ್‌’ ಇಲ್ಲವೇ, ‘ನಾಟ್‌ ವರ್ಕಿಂಗ್‌’ ಬೋರ್ಡ್‌ಗಳನ್ನು ಹಾಕಲಾಗಿದೆ.

ಇದೀಗ ಈ ಕುರಿತಂತೆ ಪ್ರತಿಕ್ರಿಯಿಸಿರುವ ಅರುಣ್‌ ಜೇಟ್ಲಿ, ದೇಶದಲ್ಲಿನ ಹಣ ಕೊರತೆ ಬಗ್ಗೆ ಅವಲೋಕನ ಮಾಡಲಾಗಿದೆ. ಸಾಕಷ್ಟು ಹಣ ಚಲಾವಣೆಯಲ್ಲಿದ್ದು, ಬ್ಯಾಂಕ್‌ನಲ್ಲೂ ಹಣವಿದೆ. ಕೆಲ ಪ್ರದೇಶಗಳಲ್ಲಿ ತಾತ್ಕಾಲಿಕ ಕೊರತೆ ‘ಹಠಾತ್‌ ಮತ್ತು ಅನಿರೀಕ್ಷಿತ ಹೆಚ್ಚಳ’ವಾಗಿದೆ. ಇದನ್ನು ತ್ವರಿತವಾಗಿ ನಿಭಾಯಿಸಲಾಗುವು’ ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English