ಮಂಗಳೂರು : ಮಂಗಳೂರು ಧರ್ಮಪ್ರಾಂತ್ಯದ ಸಿಟಿ ವಲಯದ ನೀರುಮಾರ್ಗದಲ್ಲಿ 1935 ರಲ್ಲಿ ಪ್ರಾರಂಭಗೊಂಡ ಚರ್ಚ್ ಎಪ್ರಿಲ್ 30 ರ ಸೋಮವಾರ ತನ್ನ ಸ್ಥಾಪನೆಯ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಈ ಚರ್ಚ್ ಮುರಕಲ್ಲುಗಳಿಂದ ಕೂಡಿದ್ದು, ಇಂದು ಈ ಪ್ರದೇಶದಲ್ಲಿ ತೆಂಗು, ಕಂಗು, ತರಕಾರಿ ಮುಂತಾದ ಬೆಳೆಗಳಿಂದ ಹಸಿರು ಪ್ರದೇಶವಾಗಿ ಕಂಗೊಳಿಸುತ್ತಿದೆ.
ಈ ಚರ್ಚ್ ನ ವಠಾರದಲ್ಲಿ ಕನ್ನಡ ಮಾಧ್ಯಮ ಶಾಲೆ ಇದ್ದು, 400ಕ್ಕೂ ಹೆಚ್ಚಿನ ಮಕ್ಕಳಿಗೆ ವಿಧ್ಯಾಭ್ಯಾಸ ನೀಡುತ್ತಿದೆ. 102 ವರ್ಷಗಳಿಂದ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿರುವ ಈ ಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ.
ಎಪ್ರಿಲ್ 21 ರಿಂದ ಆಚರಣೆಗೆ ಹೊರೆಕಾಣಿಕೆಯ ಮೆರವಣಿಗೆಯೊಂದಿಗೆ ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತಿದ್ದು, ಎ.30 ರ ವರೆಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಪ್ರಸ್ತುತ ಚರ್ಚ್ ನ ಧರ್ಮ ಗುರುಗಳಾದ ರೆ|ಫಾ| ಅನಿಲ್ ಡಿಮೆಲ್ಲೊ ಅವರು ಈ ಕಾರ್ಯಕ್ರಮದ ನಾಯಕತ್ವ ವಹಿಸಿದ್ದಾರೆ.
ದಿ.30 ರಂದು ನಡೆಯುವ ಕಾರ್ಯಕ್ರಮದಲ್ಲಿ ಬಲಿಪೋಜೆಯ ನೇತೃತ್ವವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜ ವಹಿಸಲಿದ್ದು ಅವರೊಂದಿಗೆ ಕೋಲ್ಕತ್ತಾದ ಆರ್ಚ್ ಬಿಷಪ್ ಡಾ|ತೋಮಸ್ ಡಿ’ಸೋಜ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಫಾ|ವಿಕ್ಟರ್ ಮಚದೊ, ಸಿ| ಪ್ಲೋರಿ ಡಿ’ಸೋಜ ಹಾಗೂ ಧರ್ಮಪ್ರಾಂತ್ಯದ ಕಾರ್ಯದರ್ಶಿ ಎಂ.ಪಿ ನೊರೊನ್ಹಾ ಭಾಗವಹಿಸಲಿದ್ದಾರೆ.
ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಪಿರೇರಾ ಕಾರ್ಯದರ್ಶಿ ಜೆರಾಲ್ಡ್ ಲೋಬೋ, ಸಮಿತಿಯ ಸಂಚಾಲಕ ಅರುಣ್ ಡಿಸೋಜ ಮತ್ತು ಪಬ್ಲಿಸಿಟಿ ಕಮಿಟಿಯ ಪ್ರಸಾದ್ ಪಿರೇರಾ ವಾಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥತರಿದ್ದರು.
Click this button or press Ctrl+G to toggle between Kannada and English