ಮಂಗಳೂರು: ಗ್ಯಾಸ್ ವೆಲ್ಡಿಂಗ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳೂರು ಹೊರವಲಯದ ತೊಕ್ಕೊಟ್ಟು ಚೆಂಬುಗುಡ್ಡೆ ಮಸೀದಿ ಬಳಿಯ ಗ್ಯಾರೇಜ್ನಲ್ಲಿ ಈ ಘಟನೆ ನಡೆದಿದೆ.
ಲತೀಶ್ (55), ನವೀನ್ ಆಚಾರಿ (30) ಗಂಭೀರ ಗಾಯಗೊಂಡ ಕಾರ್ಮಿಕರು. ಅರ್ಪಣ್ (22) ಎಂಬ ಯುವಕ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Click this button or press Ctrl+G to toggle between Kannada and English