ಮಂಗಳೂರು: ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರಿಗೆ ಟಿಕೆಟ್ ತಪ್ಪಲು ನಾನು ಕಾರಣನಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕೃಷ್ಣಾ ಜೆ. ಪಾಲೇಮಾರ್ ಹಿರಿಯ ರಾಜಕಾರಣಿ. ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬೇಸರದಿಂದ ಪ್ರತಿಕ್ರಿಯೆ ನೀಡಿದ್ದಾರೆ. ಅವರಿಗೆ ಟಿಕೆಟ್ ನಿರಾಕರಣೆ ಹಿಂದೆ ನನ್ನ ಪಾತ್ರ ಇಲ್ಲ . ಟಿಕೆಟ್ ನೀಡುವುದು ಪಕ್ಷದ ವರಿಷ್ಠರ ತೀರ್ಮಾನವಾಗಿದೆ.
ಪಕ್ಷ ಹಾಗೂ ಅಮಿತ್ ಶಾ ಸರ್ವೇ ಆಧಾರದಲ್ಲಿ ಟಿಕೆಟ್ ಫೈನಲ್ ಆಗಿದೆ. ಬಂಟ ಸಮುದಾಯದ ನಾಲ್ವರಿಗೆ ಜಿಲ್ಲೆಯಲ್ಲಿ ಟಿಕೆಟ್ ನೀಡಿದೆಯಾದರೂ ಎಲ್ಲಾ ಸಮುದಾಯದ ಜನರು ಬಿಜೆಪಿ ಜೊತೆಗಿದ್ದಾರೆ. ಎಲ್ಲಾ ರೀತಿಯ ಭಿನ್ನಮತವನ್ನು ಮಾತುಕತೆ ಮೂಲಕ ಶಮನ ಮಾಡಲಾಗುವುದು. ಪಕ್ಷ ಎಲ್ಲರಿಗೆ ಬೇರೆ ಬೇರೆ ಸ್ಥಾನ ನೀಡಿದೆ. ಕೆಲವು ಕಾರಣಕ್ಕಾಗಿ ವ್ಯತ್ಯಾಸ ಆಗುತ್ತೆ. ರಾಜ್ಯದ ಲೆಕ್ಕಾಚಾರಕ್ಕೆ ಅನುಗುಣವಾಗಿ ನೀಡಲಾಗಿದೆ ಎಂದು ತಿಳಿಸಿದರು.
Click this button or press Ctrl+G to toggle between Kannada and English