ಬಿಜೆಪಿ ಟಿಕೆಟ್ ತಪ್ಪಲು ಸಂಸದ ಕಟೀಲ್‌ ನೇರ ಕಾರಣ: ಸತ್ಯಜಿತ್‌‌

10:10 AM, Monday, April 23rd, 2018
Share
1 Star2 Stars3 Stars4 Stars5 Stars
(No Ratings Yet)
Loading...

sathyajithಮಂಗಳೂರು: ತಮಗೆ ಬಿಜೆಪಿ ಟಿಕೆಟ್ ತಪ್ಪಲು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಪ್ರಾಂತ ಪ್ರಮುಖ್ ಪಿ.ಎಸ್. ಪ್ರಕಾಶ್ ಸಹ ಕಾರಣ ಎಂದು ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಹೊಸಬೆಟ್ಟು ಬಬ್ಬುಸ್ವಾಮಿ ದೇವಸ್ಥಾನದಲ್ಲಿ ನಡೆದ ಸತ್ಯಜಿತ್ ಅಭಿಮಾನಿಗಳ ಸಭೆಯಲ್ಲಿ ಅವರು ಮಾತನಾಡಿದರು. ತಮಗೆ ಟಿಕೆಟ್‌ ಕೈತಪ್ಪಲು ಸಂಸದ ನಳಿನ್ ಕುಮಾರ್ ಕಟೀಲ್ ಅವರೇ ನೇರ ಕಾರಣ. ಇದರ ಜೊತೆಗೆ ಆರ್‌‌ಎಸ್‌ಎಸ್‌‌ ಎಂದು ಆರೋಪ ಮಾಡಿದ ಸತ್ಯಜಿತ್ ಸುರತ್ಕಲ್, ಟಿಕೆಟ್ ಕೈತಪ್ಪಿದ್ದಕ್ಕೆ ಸೂಕ್ತ ಕಾರಣ ನೀಡುವಂತೆ ಆಗ್ರಹಿಸಿದರು.

ತಾನು ಕಳೆದ 35 ವರ್ಷಗಳಿಂದ ಪಕ್ಷಕ್ಕಾಗಿ, ಸಂಘಕ್ಕಾಗಿ ರಾತ್ರಿ ಹಗಲು ದುಡಿದಿದ್ದೇನೆ ಎಂದು ಹೇಳಿದ ಸತ್ಯಜಿತ್, ಪಕ್ಷದ ಆಂತರಿಕ ಸರ್ವೇಯ ಆಧಾರದಲ್ಲಿ ಟಿಕೆಟ್ ನೀಡಲಾಗಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಕೇಂದ್ರ ನಾಯಕರ ನಿರ್ಧಾರ ಅನ್ನುವುದನ್ನೂ ಒಪ್ಪುವುದಿಲ್ಲ. ಯಾವ ಕಾರಣಕ್ಕೆ ಟಿಕೆಟ್ ನಿರಾಕರಿಸಿದ್ದೀರಿ ಎಂಬುದಕ್ಕೆ ಸ್ಪಷ್ಟ ಮಾಹಿತಿ ಕೊಡಿ ಎಂದು ಆಗ್ರಹಿಸಿದರು.

ಈ ಬಗ್ಗೆ ಸ್ಪಷ್ಟ ಉತ್ತರವನ್ನು ಸೋಮವಾರ ಬೆಳಗ್ಗೆ 10 ಗಂಟೆಯೊಳಗೆ ನೀಡಬೇಕು. ಅಲ್ಲಿಯ ತನಕ ಪಕ್ಷದ ನಾಯಕರಿಗೆ ನಾನು ಸಮಯ ನೀಡುತ್ತೇನೆ. ಇಲ್ಲದಿದ್ದರೆ ಅಭಿಮಾನಿಗಳು ಪಕ್ಷೇತರನಾಗಿ ಸ್ಪರ್ಧಿಸಲು ಒತ್ತಾಯಿಸಿದ್ದಾರೆ. ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸತ್ಯಜಿತ್ ಸ್ಪಷ್ಟಪಡಿಸಿದರು.

ಕಳೆದ ಎರಡು ಸತತ ಲೋಕಸಭಾ ಚುನಾವಣೆ ವೇಳೆ ಸಂಸದ ನಳಿನ್ ಗೆಲುವಿಗಾಗಿ ಶ್ರಮ ವಹಿಸಿದ್ದೆ ಎಂಬುದನ್ನು ನೆನಪಿಸಿದ ಅವರು, ತಮ್ಮನ್ನು ಕಾರ್ಯಕರ್ತರು ಬೆಳೆಸಿದ್ದೇ ಹೊರತು ನಾಯಕರಲ್ಲ ಎಂದು ಸೂಚ್ಯವಾಗಿ ನಳಿನ್ ವಿರುದ್ಧ ಕಿಡಿಕಾರಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English