ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ !

12:56 PM, Monday, April 23rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

HJSಮಂಗಳೂರು  : ಹಿಂದೂ ಜನಜಾಗೃತಿ ಸಮಿತಿ ಇದು ಸಮಾಜ ಸಹಾಯ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಕಾರ್ಯ ಮಾಡುವ ರಾಜಕೀಯೇತರ ಸ್ವಯಂಸೇವಾ ಸಂಘಟನೆಯಾಗಿದೆ. ಸಮಿತಿಯು ಕಳೆದ ೧೬ ವರ್ಷಗಳಿಂದ ಧರ್ಮಶಿಕ್ಷಣ, ಧರ್ಮಜಾಗೃತಿ ಮತ್ತು ಧರ್ಮರಕ್ಷಣೆಯ ಉಪಕ್ರಮಗಳ ಮಾಧ್ಯಮದಿಂದ ರಾಷ್ಟ್ರವ್ಯಾಪಿ ಹಿಂದೂ ಸಂಘಟನೆಯ ಕಾರ್ಯ ಮಾಡುತ್ತಿದೆ. ಹಿಂದೂಗಳ ಸಾಮಾಜಿಕ, ರಾಷ್ಟ್ರೀಯ ಮತ್ತು ಧಾರ್ಮಿಕ ಸಮಸ್ಯೆಗಳ ಪರಿಹಾರಕ್ಕಾಗಿ ‘ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದು’, ಇದೊಂದೇ ಧ್ಯೇಯವನ್ನಿಟ್ಟುಕೊಂಡು ಸಮಿತಿಯು ಸಮಸ್ತ ಹಿಂದೂಗಳನ್ನು ಜಾಗೃತ ಮತ್ತು ಸಂಘಟಿತಗೊಳಿಸುವ ಕಾರ್ಯ ಮಾಡುತ್ತಿದೆ.

ಕೆಲವು ದಿನಪತ್ರಿಕೆಗಳಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಚುನಾವಣೆ ಸ್ಪರ್ಧಿಸಲಿದೆ ಎಂಬ ವಾರ್ತೆ ಪ್ರಕಟವಾಗಿದೆ. ಆದರೆ ಅದರಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ಹೆಸರನ್ನು ಹೇಗೆ ಉಲ್ಲೇಖಿಸಲಾಯಿತು ಇದರ ಬಗ್ಗೆ ನಮಗೆ ಯಾವುದೇ ಕಲ್ಪನೆ ಇಲ್ಲ. ಈ ರೀತಿ ರಾಜಕೀಯ ಕಾರ್ಯ ಮಾಡುವುದು ನಮ್ಮ ತತ್ತ್ವಕ್ಕೆ ಹೊಂದಾಣಿಕೆಯಾಗುವುದಿಲ್ಲ. ಆದುದರಿಂದ ನಾವು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆಗಿಳಿಯುವ ಅಥವಾ ರಾಜಕೀಯ ಪಕ್ಷ ಸ್ಥಾಪಿಸುವ ನಿರ್ಧಾರ ಮಾಡಿಲ್ಲ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೂ ಲಿಖಿತ ನಿವೇದನೆ ನೀಡಲಿದ್ದೇವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English