ಪ್ರಚಾರದ ವೇಳೆ ಹೆಚ್‌ಡಿಕೆ-ನಿಖಿಲ್‌ ಮುಖಾಮುಖಿ: ಭಾವುಕರಾದ ಅಪ್ಪ-ಮಗ

4:35 PM, Tuesday, April 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

nickil-kumarಬೆಂಗಳೂರು: ಚುನಾವಣಾ ಹಿನ್ನೆಲೆಯಲ್ಲಿ ದೇವೇಗೌಡರ ಕುಟುಂಬಸ್ಥರು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಪ್ರಚಾರ ಮಾಡುತ್ತಿದ್ದಾರೆ. ಹಾಗೆಯೇ ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಗೌಡ ಕೂಡ ಪ್ರಚಾರದಲ್ಲಿ ತೊಡಗಿದ್ದಾರೆ.

ಪ್ರಚಾರದ ವೇಳೆ ಅನಿರೀಕ್ಷಿತವಾಗಿ ಕುಮಾರಸ್ವಾಮಿ ಹಾಗೂ ನಿಖಿಲ್ ಗೌಡ ಕುಣಿಗಲ್‌ನಲ್ಲಿ ಮುಖಾಮುಖಿಯಾದರು. ಈ ವೇಳೆ ಅಪ್ಪ, ಮಗ ಭಾವುಕರಾಗಿ ಅಪ್ಪಿಕೊಂಡ ಪ್ರಸಂಗ ನಡೆಯಿತು.

ಇದೇ ವೇಳೆ ಕುಮಾರಸ್ವಾಮಿ ಅವರು ಮಮತೆಯಿಂದ ಮಗನ ಮುಖದ ಮೇಲೆ ಕೈಯಾಡಿಸಿದರು. ಈ ಸನ್ನಿವೇಶಕ್ಕೆ ಅಪರೂಪದ ಚಿತ್ರಗಳೇ ಸಾಕ್ಷಿಯಾಗಿವೆ.

ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಗಲಿ ಎಂದು ನಿಖಿಲ್ ಗೌಡ ಅವರು ಪ್ರಚಾರಕ್ಕಿಳಿದಿದ್ದಾರೆ. ಅಂತೆಯೇ ಜೆಡಿಎಸ್ ಪರ ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English