ಮಂಗಳೂರು: ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿಯ ಪ್ರಣಾಳಿಕೆಯನ್ನು ಎಂಇಪಿ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಪಿ.ಎಂ. ಅಹಮ್ಮದ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೀನ ದಲಿತರ ಬಡವರ ವಿರುದ್ಧ ನಡೆಯುವ ಶೋಷಣೆ ಹಾಗೂ ಮಹಿಳೆಯರ ಶೋಷಣೆ ವಿರುದ್ಧ ಸಮಾಜದಲ್ಲಿ ಕೈಜೋಡಿಸಲು ಎಂಇಪಿ ಪಕ್ಷಕ್ಕೆ ಮತ ನೀಡಬೇಕು. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಸುಮಾರು 125 ಹಾಸಿಗೆಗಳ ವ್ಯವಸ್ಥಿತ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಬೇಕು. ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಣ ಉತ್ತಮ ರೀತಿಯಲ್ಲಿ ನಡೆಯಲು ಶಿಕ್ಷಕರ ನೇಮಕಾತಿಯಾಗಬೇಕು.
ಉತ್ತರ ಕ್ಷೇತ್ರದ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಬೃಹತ್ ಕೈಗಾರಿಕಾ ಕಂಪೆನಿಯಲ್ಲಿ ಉದ್ಯೋಗ ದೊರೆಯಬೇಕು. ಮಹಿಳೆಯರಿಗೆ ಶಾಸನಸಭೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50 ರಷ್ಟು ಸ್ಥಾನ ಮೀಸಲು ಹಾಗೂ ರಾಜಕೀಯ ಅಧಿಕಾರಕ್ಕೋಸ್ಕರ ನಡೆಯುವ ಜಾತಿ ಗಲಭೆ ಕೊನೆಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಂಇಪಿ ಚುನಾವಣಾ ಪ್ರಚಾರಕ ಕಬೀರ್ ಕಾಟಿಪಳ್ಳ, ಕಾರ್ಮಿಕ ಮುಖಂಡ ಅಸ್ಪರ್, ಕಾರ್ಯಕರ್ತರಾದ ಮುಸ್ತಫಾ, ರಿಝ್ವಾನ್ ಕಾಟಿಪಳ್ಳ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English