ಬಂಟ್ವಾಳ: ಬಿಜೆಪಿಯವರಿಗೆ ಪ್ರಚಾರ ಮಾಡಲು ವಿಷಯವೇ ಇಲ್ಲ. ಅದಕ್ಕಾಗಿ ತನ್ನ ಮೇಲೆ ಸುಳ್ಳು ಆರೋಪವನ್ನು ಮಾಡುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಹೇಳಿದ್ದಾರೆ.
ಮಂಗಳವಾರ ಕೊಳ್ನಾಡ್ ಗ್ರಾಮದ ಬೂತ್ ಮಟ್ಟದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಯು ತನ್ನ ಮೇಲೆ ಧರ್ಮ ವಿರೋಧಿ ಹಣೆಪಟ್ಟಿ ಕಟ್ಟಿ, ಅಪಪ್ರಚಾರದ ಮೂಲಕ ಮತವನ್ನು ತಮ್ಮತ್ತ ಸೆಳೆದುಕೊಳ್ಳುವುದು ಕೂಡಾ ರಾಜಧರ್ಮವಲ್ಲ ಎಂದು ಹೇಳಿದರು.
ಬಂಟ್ವಾಳ ಕ್ಷೇತ್ರಕ್ಕೆ ಸುಮಾರು ಸಾವಿರದ ಇನ್ನೂರು ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಿಸಿ ಇಷ್ಟೆಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಯಾವುದಾದರೂ ಕೆಲಸವೊಂದು ಮಾಡದೆ ಉಳಿದಿದ್ದರೆ, ಅಥವಾ ನಿಕ್ಷಿಸಿದ್ದರೆ ಅದನ್ನು ರಾಜಾರೋಷವಾಗಿ ಹೇಳಲಿ. ಅದಕ್ಕೆ ತಾನು ತಲೆಬಾಗುತ್ತೇನೆ ಎಂದು ಹೇಳಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಎಂ.ಎಸ್. ಮುಹಮ್ಮದ್, ಸುಬಾಸ್, ಇಬ್ರಾಹಿಂ, ಅಬ್ದುಲ್ಲಾ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English