ಜೆ.ಆರ್.ಲೋಬೋ ರವರ ಆಸ್ತಿ ಹೆಚ್ಚಾಗಿರುವುದೇ ಅವರ ಐದು ವರ್ಷದ ಅಭಿವೃದ್ಧಿಯ ಸಾಧನೆ – ಸುನಿಲ್ ಕುಮಾರ್ ಬಜಾಲ್

2:36 PM, Friday, April 27th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

sunilbajalಮಂಗಳೂರು  : ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಜೆ.ಆರ್.ಲೋಬೋರವರಲ್ಲಿದ್ದ ಆಸ್ತಿ ಈ ಚುನಾವಣೆಯ ಸಂದರ್ಭದಲ್ಲಿ ಎರಡುಪಟ್ಟು  ಜಾಸ್ತಿಯಾಗಿರುವುದು ನೋಡಿದರೆ ಈ ಕ್ಷೇತ್ರದಲ್ಲಿ ಆಯ್ಕೆಯಾದ ಶಾಸಕರು ಮಂಗಳೂರನ್ನು ಅಭಿವೃದ್ಧಿ ಮಾಡುವ ಬದಲು ತಾವೇ ಅಭಿವೃದ್ಧಿಯಾಗಿರುವುದು ಇವರ ಮಹಾನ್ ಸಾಧನೆ ಎಂದು ನಿನ್ನೆ ಬಿಕರ್ಣಕಟ್ಟೆ ಯಲ್ಲಿ ನಡೆದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಂಗಳೂರಿನ ಅಭಿವೃದ್ದಿಗೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಎಡಿಬಿ ಯೋಜನೆಯ ಮೂಲಕ 740 ಕೋಟಿ ಸಾವಿರ ರೂಪಾಯಿಗಳನ್ನು ಸಾಲದ ರೂಪದಲ್ಲಿ ತಂದು ಮಂಗಳೂರು ನಗರದ ಸಂಪೂರ್ಣ ಡ್ರೈನೇಜ್ ವ್ಯವಸ್ಥೆಯನ್ನು  ನಿರ್ಮಾಣದಲ್ಲಿ ನಡೆದ  ಬ್ರಹ್ಮಾಂಡ ಭ್ರಷ್ಟಾಚಾರದ ಪ್ರಮುಖ ಪಾತ್ರದಾರಿ ಇದೇ ಶಾಸಕರಾದ ಜೆ.ಆರ್ ಲೋಬೋ ರವರು.ಕಳೆದ 10 ವರುಷಗಳಿಂದ ಡ್ರೈನೇಜ್ ಕಾಮಗಾರಿ ಪೂರ್ಣವೂ ಗೊಂಡಿಲ್ಲ,ನಡೆದ ಕಾಮಗಾರಿ ಕಳಪೆ ಮಟ್ಟದ್ದಾಗಿದ್ದು ಮಾತ್ರವಲ್ಲದೇ ಈವರೆಗೂ ಡ್ರೈನೇಜ್ ಸಂಪರ್ಕ  ವ್ಯವಸ್ಥೆಯನ್ನು ಮಾಡಲು ಸಾದ್ಯವಾಗಲಿಲ್ಲ.ನಗರದ ಜನ ಎಡಿಬಿಯ ಸಾಲವನ್ನು ಸ್ವಯಂ ಘೋಷಿತ ಆಸ್ತಿ ತೆರಿಗೆಯ ಮೂಲಕ ಇವತ್ತಿಗೂ ಕಟ್ಟುತ್ತಿದ್ದಾರೆ ಆದರೆ ಜನರ ಮೂಲಭೂತ ಸೌಕರ್ಯಗಳನ್ನು ಈವರೆಗೂ ಶಾಸಕರು ಒದಗಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ.ಬದಲಾಗಿ ಜನರ ಹಣವನ್ನೂ ಊಟಿ ಮಾಡಿ  ತಮ್ಮ ಆಸ್ತಿಯನ್ನು ಹೆಚ್ಚಿಸುವ ಮೂಲಕ ತಮ್ಮ ಕ್ಷೇತ್ರದ ಜನರಿಗೆ ಅನ್ಯಾಯ ವೇಸಗಿದ್ದಾರೆ.ಮತ್ತೆ ಇಂತವರನ್ನು ಆಯ್ಕೆ ಮಾಡಿದರೆ  ನಮ್ಮ ಕ್ಷೇತ್ರ ಅಭಿವೃದ್ಧಿ ಯಾಗಲು  ಸಾದ್ಯವೇ ಇಲ್ಲ.

ಇನ್ನೊಂದು ಕಡೇ ಬಿ.ಜೆ.ಪಿ. ಕೇವಲ ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತದೆ. ಹಿಂದೂ ಯುವಕರನ್ನೇ ಹತ್ಯೆ ಮಾಡುತ್ತಾರೆ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಹಿಂದಿನ ಸೂತ್ರದಾರಿಗಳು ಯಾರೆಂದು ನಗರದ ಜನತೆಗೆ ತಿಳಿದಿದೆ.ಇನ್ನು ಮತೀಯ ಗಲಭೆಯಲ್ಲಿ ಹತರಾದ ಶವದ ಹೆಸರಲ್ಲಿ ಹರಾಜಕತೆ ಮೂಲಕ ಗಲಭೆ ಸೃಷ್ಟಿಸಿ  ಹಿಂದುಳಿದ ಯುವಕರನ್ನು ಬಲಿಪಶುಗಳನ್ನಾಗಿ ಮಾಡಿಸುವುದೇ ಇವರ ಕಾಯಕ. ಈ ಎರಡು ಪಕ್ಷಗಳಿಗೆ ನಮ್ಮ ಜನಸಾಮಾನ್ಯರ , ಬಡವರ ,ಕಾರ್ಮಿಕರ ಬಗೆಗಿನ ಯಾವುದೇ ಕಾಳಜಿ ಇಲ್ಲ .ಇಂತಹ ಮನೋಭಾವವಿರುವ ಎರಡು ಪಕ್ಷಗಳನ್ನು ಈ ಚುನಾವಣೆಯಲ್ಲಿ ಸೋಲಿಸುವ ಮೂಲಕ  ದಿನನಿತ್ಯ ಜನಸಾಮಾನ್ಯರ ಸ್ವರವಾಗಿರುವ ಸಿಪಿಐ(ಎಂ) ಪಕ್ಷಕ್ಕೆ ನಿಮ್ಮ ಮತ ನೀಡುವ ಮೂಲಕ ವಿಧಾನಸಭೆಯಲ್ಲಿ ಜನಸಾಮಾನ್ಯರ ವಿಚಾರಗಳ ಬಗ್ಗೆ ದ್ವನಿ ಎತ್ತಲು ಒಂದು ಅವಕಾಶ ನೀಡಬೇಕೆಂದು ಸುನಿಲ್ ಕುಮಾರ್ ಬಜಾಲ್ ಈ ವೇಳೆ ವಿನಂತಿಸಿದರು. .

ಸಭೆಯಲ್ಲಿ ಚುನಾವಣೆ ಸಮಿತಿಯ ಮುಖಂಡರಾದ ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ, ಸಿಐಟಿಯು ಮುಖಂಡರಾದ ಬಾಬುದೇವಾಡಿಗ ಮೊದಲಾದವರು ಉಪಸ್ಥಿತಿಯಲ್ಲಿದರು. ಮೊದಲಿಗೆ ಲಿಂಗಪ್ಪ ನಂತೂರು ಸ್ವಾಗತಿಸಿ. ಕೊನೆಯಲ್ಲಿ ವಾಸುದೇವ ಜೆ.ಪಿ.ವಂದಿಸಿದರು.

ಕೊನೆಯ ಸುನೀಲ್ ಕುಮಾರ್ ಬಜಾಲ್ ಅವರ ಜನಪರ ಹೋರಾಟದ ಹಿನ್ನೆಲೆಯ ಸಾಕ್ಷ್ಯಚಿತ್ರ ವನ್ನು ಪ್ರದರ್ಶಿಸಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English