ಬಂಟ್ವಾಳ: ಕಾಂಗ್ರೆಸ್ ಮುಖಂಡರಿಗೆ ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರ ಜನಪ್ರಿಯತೆ ಬಂಟ್ವಾಳದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಕೇಳಿಬಂದ ಜೈಕಾರದಿಂದ ಮನದಟ್ಟಾಗಿದೆ.
ಸಮಾವೇಶಕ್ಕೆ ಜನಾರ್ದನ ಪೂಜಾರಿಯವರು ಆಗಮಿಸಿದ ಸಂದರ್ಭ ಕೇಳಿಬಂದ ಜೈಕಾರದ ಅಬ್ಬರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಭಾಷಣವನ್ನೇ ಕೆಲಕಾಲ ನಿಲ್ಲಿಸಿ ಬಿಟ್ಟರು.
ಜನಾರ್ದನ ಪೂಜಾರಿಯವರನ್ನು ವೇದಿಕೆಗೆ ಬರಮಾಡಿಕೊಂಡ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ತಮ್ಮ ಪಕ್ಕದಲ್ಲೇ ಕುಳ್ಳಿರಿಸಿಕೊಂಡರು.
ಬಳಿಕ ಭಾಷಣ ಮುಂದುವರೆಸಿದ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಮೂರು ಕಾಸಿನ ಮಾನ ಮರ್ಯಾದೆ ಇಲ್ಲ. 2008 ರ ಲೂಟಿ ಕೋರರು ಮತ್ತೆ ಒಂದಾಗಿದ್ದಾರೆ. ರೆಡ್ಡಿ, ರಾಮುಲು, ಬಿಎಸ್ ವೈ, ಶೋಭಾ ಕರಂದ್ಲಾಜೆ ಲೂಟಿಕೋರರು. 5 ವರ್ಷದಲ್ಲಿ 1 ಲಕ್ಷ ಕೋಟಿ ಲೂಟಿಯಾಗಿದೆ ಎಂದು ಸಿಎಂ ವಾಗ್ದಾಳಿ ನಡೆಸಿದರು.
ರಿಪಬ್ಲಿಕ್ ಆಫ್ ಬಳ್ಳಾರಿ ಅಂತ ಸಂತೋಷ್ ಹೆಗ್ಡೆ ಕರೆದಿದ್ದಾರೆ. ನಾನು ಒಬ್ಬಂಟಿಯಾಗಿ ರೆಡ್ಡಿಯ ಬಳ್ಳಾರಿಗೆ ಹೋಗಿದ್ದೇನೆ. ರೆಡ್ಡಿ ಬ್ರದರ್ಸ್ ಗೂಂಡಾ ಗ್ಯಾಂಗ್. ಬಳ್ಳಾರಿಯಲ್ಲಿ ಡಿಸಿ ಕೂಡಾ ರೆಡ್ಡಿಗಳ ಹುಕುಂನಂತೆ ನಡೆದುಕೊಳ್ಳುತ್ತಿದ್ದರು ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
Click this button or press Ctrl+G to toggle between Kannada and English