ಮೋದಿ ಬಸವಣ್ಣನ ವಚನ ಪುಸ್ತಕ ಓದಿ, ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ: ರಾಹುಲ್‌ ಗಾಂಧಿ

6:01 PM, Friday, April 27th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

speech-rahulಮಂಗಳೂರು: ಸಚಿವ ರಮಾನಾಥ ರೈ ಮತಕ್ಷೇತ್ರ ಬಂಟ್ವಾಳದಲ್ಲಿ ನಡೆದ ಕಾಂಗ್ರೆಸ್‌ನ ಬೃಹತ್‌ ಸಮಾವೇಶದಲ್ಲಿ ಎಐಸಿಸಿ ರಾಹುಲ್‌ ಗಾಂಧಿ ಭಾಗವಹಿಸಿ ಬಿಜೆಪಿ ಹಾಗೂ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮೋದಿ ಹೋದಲ್ಲೆಲ್ಲಾ ಮನ್ ಕೀ ಬಾತ್ ಹೇಳ್ತಾರೆ. ನಮ್ಮದು ಕರ್ನಾಟಕದ ಜನರ ಮನದ ಮಾತು. ಜನರ ಮನವನ್ನು ನಾವು ಪ್ರಣಾಳಿಕೆಯಲ್ಲಿ ಅಳವಡಿಸಿದ್ದೇವೆ. ಮುಚ್ಚಿದ ಕೋಣೆಯಲ್ಲಿ ನಾವು ಪ್ರಣಾಳಿಕೆ ತಯಾರಿಸಿಲ್ಲ. ಬಸವಣ್ಣನ ವಚನ ನುಡಿದಂತೆ ನಡೆಯನ್ನು ನಾವು ಅನುಸರಿಸಿದ್ದೇವೆ.

ರೆಡ್ಡಿ ಬ್ರದರ್ಸ್‌ಗೆ 8 ಟಿಕೆಟ್ ಕೊಟ್ಟಿದ್ದಾರೆ. ರೆಡ್ಡಿ, ಯಡಿಯೂರಪ್ಪ, ಜೈಲಿಗೆ ಹೋದವರು. ಅವರಿಗೆ ಟಿಕೆಟ್‌ ನೀಡಿ ಭ್ರಷ್ಟಾಚಾರ ವಿರೋಧಿಯಂತೆ ಮೋದಿ ಮಾತನಾಡುತ್ತಾರೆ. ಪ್ರಧಾನಿ ಮೋದಿ ಜೈಲಿಗೆ ಹೋದವರ ಜೊತೆ ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

speech-rahul-2ಸಿಬಿಐ ಅನ್ನು ಇಲ್ಲೀಗಲ್ ಮೈನಿಂಗ್‌ಗೆ ಹೋಲಿಸಿದ ರಾಹುಲ್ ಗಾಂಧಿ, ಸೆಂಟ್ರಲ್ ಬ್ಯೂರೋ ಆಫ್ ಇಲ್ಲೀಗಲ್ ಮೈನಿಂಗ್‌ ಎಂದು ಆರೋಪಿಸಿದರು. ರೆಡ್ಡಿ ಬ್ರದರ್ಸ್ ಇಡೀ ಕರ್ನಾಟಕವನ್ನು ಲೂಟಿ ಮಾಡಿದ್ದಾರೆ. ದೇಶದ ರೈತರಿಗೆ ಯುಪಿಎ ಸರ್ಕಾರ ಕೊಟ್ಟ ಹಣದಷ್ಟು ಮೊತ್ತವನ್ನು ರೆಡ್ಡಿ ಗ್ಯಾಂಗ್ ಲೂಟಿ ಮಾಡಿದೆ. ದೇಶದಲ್ಲಿ ಎಲ್‌‌ಪಿಜಿ, ಪೆಟ್ರೋಲ್ ಲೂಟಿಯಾಗುತ್ತಿದೆ. ಲೂಟಿ ಮಾಡಿದ ಹಣ ಮೋದಿ ಆಪ್ತರ ಕಿಸೆಗೆ ಹೋಗುತ್ತದೆ ಎಂದು ಗಂಭೀರ ಆರೋಪ ಮಾಡಿದರು.

ಬೇಟಿ ಬಚಾವೋ ಬೇಟಿ ಪಡಾವೋ ಅಂತಾರೆ. ಆದರೆ ಅತ್ಯಾಚಾರ ನಡೆದರೂ ಮೋದಿ ತುಟಿ ಬಿಚ್ಚುವುದಿಲ್ಲ. ಮೋದಿಯವರೇ ಬಸವಣ್ಣನ ವಚನವನ್ನು ಓದಿ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಮಾಡಿದ್ದಾರೆ. ನಾವು ಐದು ವರ್ಷದಲ್ಲಿ ನುಡಿದಂತೆ ನಡೆದಿದ್ದೇವೆ. ಮೋದಿ ಬಸವಣ್ಣನ ವಚನ ಪುಸ್ತಕ ಓದಿ, ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ ಎಂದು ರಾಹುಲ್‌ ಸಲಹೆ ನೀಡಿದರು.

speech-rahul-3ಇನ್ನು ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ರೆಡ್ಡಿ ಗ್ಯಾಂಗ್‌ ವಿರುದ್ಧ ಹರಿಹಾಯ್ದರು. ರಿಪಬ್ಲಿಕ್ ಆಫ್ ಬಳ್ಳಾರಿ ಅಂತ ಸಂತೋಷ್ ಹೆಗ್ಡೆ ಕರೆದಿದ್ದಾರೆ. ನಾನು ಒಬ್ಬಂಟಿಯಾಗಿ ರೆಡ್ಡಿಯ ಬಳ್ಳಾರಿಗೆ ಹೋಗಿದ್ದೇನೆ. ರೆಡ್ಡಿ ಬ್ರದರ್ಸ್ ಗೂಂಡಾ ಗ್ಯಾಂಗ್. ಬಳ್ಳಾರಿಯ ಭಯದ ವಾತಾವರಣ ಮತ್ತೆ ಶುರುವಾಗಿದೆ. ಕರಾವಳಿ ಬಿಜೆಪಿಯ ಕೋಮುವಾದವನ್ನು ಮೆಟ್ಟಿ ನಿಂತಿದ್ದೇವೆ ಎಂದರು. ಬಿಜೆಪಿ ನಾಯಕರಿಗೆ ಮೂರು ಕಾಸಿನ ಮಾನ ಮರ್ಯಾದೆ ಇಲ್ಲ. 2008ರ ಲೂಟಿಕೋರರು ಮತ್ತೆ ಒಂದಾಗಿದ್ದಾರೆ. ರೆಡ್ಡಿ, ರಾಮುಲು, ಬಿಎಸ್‌‌‌ವೈ, ಶೋಭಾ ಕರಂದ್ಲಾಜೆ ಲೂಟಿಕೋರರು. 5 ವರ್ಷದಲ್ಲಿ 1 ಲಕ್ಷ ಕೋಟಿ ಲೂಟಿಯಾಗಿದೆ ಎಂದು ಸಿಎಂ ಆರೋಪಿಸಿದರು.

speech-rahul-4ಸಿಎಂ ಭಾಷಣ ಮಧ್ಯೆಯೇ ಸಮಾವೇಶಕ್ಕೆ ಜನಾರ್ದನ ಪೂಜಾರಿ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಜೈಕಾರ ಕೂಗಿದರು. ಜೈಕಾರದ ಅಬ್ಬರಕ್ಕೆ ಸಿಎಂ ಸಿದ್ದರಾಮಯ್ಯ ಭಾಷಣ ನಿಲ್ಲಿಸಿದರು. ನಂತರ ಮಾತನಾಡಿದ ಅವರು, ಮಧ್ಯಾಹ್ನದ ವೇಳೆ ಮಸೀದಿಗೆ ಹೋಗುವ ಜನ ಇಲ್ಲಿ ಜಾಸ್ತಿ ಇದ್ದೀರಿ. ಹೆಚ್ಚು ಹೊತ್ತು ನಾವು ಮಾತನಾಡಲ್ಲ ಎಂದು ಹೇಳಿ ಭಾಷಣ ನಿಲ್ಲಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English