ಮಂಗಳೂರು : ತಾವೇ ತೋಡಿದ ಖೆಡ್ಡಾಕ್ಕೆ ತಾವೇ ಬಿದ್ದಂತೆ ಎಂಬ ಹಳೆಯ ಮಾತಿದೆ. ಭಾರೀ ಬುದ್ಧಿವಂತಿಕೆ ತೋರಿಸಿ ಲಾಭ ಮಾಡಲು ಹೋಗಿ ತಾವೇ ಗುಂಡಿಗೆ ಬೀಳುವ ಜನರಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ವಿಚಾರದಲ್ಲಿ ಈಗ ಹೀಗೆಯೋ ಆದಂತಿದೆ.
ಕಳೆದೆರಡು ಮೂರು ತಿಂಗಳಿನಿಂದ ಮೂಡಬಿದಿರೆಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹವಾ ಭಾರೀ ಜೋರಾಗಿತ್ತು. ಈಗ ಕಾಂಗ್ರೆಸ್ ಹವಾ ಠುಸ್ ಆಗಿದೆ. ಕಾಂಗ್ರೆಸ್ ಪರವಾಗಿದ್ದ ಯುವಕರ ಗುಂಪು ತಂಢಾ ಹೊಡೆದಿದೆ. ಇದಕ್ಕೆ ಕಾರಣ ಯುವಕಾಂಗ್ರೆಸ್ ಮುಖಂಡ ಮಿಥುನ್ ರೈ ಮುನಿಸಿಕೊಂಡಿರುವುದು.
ಮೂಡಬಿದಿರೆಯಲ್ಲಿ ಮುಂದಿನ ಶಾಸಕ ಮಿಥುನ್ ರೈ ಎಂದೇ ಅಭಯಚಂದ್ರ ಜೈನ್ ನಂಬಿಸಿದರಂತೆ. ಇದರಿಂದಾಗಿ ಮಿಥುನ್ ರೈ ಸಾಕಷ್ಟು ರೊಕ್ಕ ಬಿಚ್ಚಿದರಂತೆ. ಬಿಜೆಪಿ, ಹಿಂದೂತ್ವ, ಕಾಂಗ್ರೆಸ್, ಬಿಲ್ಲವ, ಬಂಟ ಎಂಬ ತಾರತಮ್ಯ ಇಲ್ಲದೆ ಯುವಕರೆಲ್ಲ ಕಿಂದರಿ ಜೋಗಿಯಂತಿ ಮಿಥುನ್ ರೈ ಹಿಂದಿ ಬಿದ್ದಿದ್ದರು. ಈ ಟಿಕೇಟನ್ನು ಅಭಯರೇ ಪಡೆದುಕೊಂಡಿರುವುದು ಶ್ಯಾನೇ ಬೇಜಾರಿಗಿರುವುದಲ್ಲದೆ ಅಭಯ ಹಿಂದೆ ಜನರೇ ಇಲ್ಲವಂತೆ.
ಇವರೊಂದಿಗಿದ್ದ ಯುವಕರೆಲ್ಲ ಬಿಜೆಪಿ ಅಭ್ಯರ್ಥಿ ಉಮನಾಥ ಕೋಟ್ಯಾನ್ ಅವರನ್ನು ಸೇರಿಕೊಂಡಿದ್ದಾರೆ ಎಂಬುದನ್ನು ಸ್ವತ ಜೈನ್ ಬೆಂಬಲಿಗರೇ ಖಚಿತ ಪಡಿಸಿದ್ದಾರೆ. ಜಿಲ್ಲೆಯ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ಹೊರಟಿರುವಾಗ ಅಭಯರು ಹೀಗೇಕೆ ಮಾಡಿದರು ಎಂದು ಮಲ್ಲಿಕಟ್ಟೆಯಲ್ಲಿ ಇವರದೇ ಚರ್ಚೆ.
ಮೀನುಗಾರಿಕಾ ಇಲಾಖೆ ನೀಡಿದಾಗ ಕ್ಯಾತೆ ತೆಗೆದಿದ್ದ ಸಚಿವರನ್ನು ಮುಖ್ಯಮಂತ್ರಿ ನಯವಾಗಿ ಗದರಿಸಿದ್ದು ಇಂದಿಗೂ ಕೂಡ ಮೀನು ತಿನ್ನುವವರು ಮರೆತಿಲ್ಲ. ಸಮಸ್ತ ಮೀನಿನ ಆಹಾರ ಸೇವಿಸುವವರಿಗೆ ಅಭಯರ ಮೇಲೆ ಅಸಮಾಧಾನ ಇದೆ ಎನ್ನಲಾಗಿದೆ.
Click this button or press Ctrl+G to toggle between Kannada and English