ನಾವು ಜಾತಿ ಧರ್ಮ, ಹಿಂದುತ್ವದ ಬಗ್ಗೆ ಪ್ರಕಾಶ್ ರೈ ಅವರಿಂದ ಕಲಿಯಬೇಕಿಲ್ಲ :ಮಂಜುಳಾ ರಾವ್

10:38 AM, Saturday, April 28th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

manjulaಮಂಗಳೂರು: ಚಿತ್ರನಟ ಪ್ರಕಾಶ್ ರೈ ಅವರು ತಮಿಳುನಾಡಿನಲ್ಲಿ ಕೆಲಸವಿಲ್ಲದೆ ಇಲ್ಲಿಗೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಮಂಡಲ ಅಧ್ಯಕ್ಷೆ ಮಂಜುಳಾ ರಾವ್ ವ್ಯಂಗ್ಯವಾಡಿದ್ದಾರೆ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಅವರ ಪತ್ನಿ ಧರ್ಮದ ಆಧಾರದಲ್ಲಿ ಮತ ಕೇಳಿದ್ದಾರೆ ಎಂದು ನಟ ಪ್ರಕಾಶ್ ರೈ ಟ್ವೀಟ್ ಮಾಡಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ನೀವು ನಟ ಎನ್ನುವುದು ಗೊತ್ತಿದೆ. ನೀವು ಎಲ್ಲವನ್ನೂ ತ್ಯಜಿಸಿ ಸಂತ ಪದವಿಗೆ ಏರಿದ್ದೀರಿ ಎನ್ನುವುದು ಗೊತ್ತಿದೆ. ನೀವು ಜಾತಿ, ಧರ್ಮ, ರಾಜಕೀಯದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದನ್ನೆಲ್ಲಾ ನಮ್ಮಂತಹವರಿಗೆ ಬಿಟ್ಟುಬಿಡಿ ಎಂದು ಕಿವಿಮಾತು ಹೇಳಿದರು.

ನಾವು ಜಾತಿ ಧರ್ಮ, ಹಿಂದುತ್ವದ ಬಗ್ಗೆ ಪ್ರಕಾಶ್ ರೈ ಅವರಿಂದ ಕಲಿಯಬೇಕಿಲ್ಲ. ಗೌರಿ ಹತ್ಯೆ, ಕಾಶ್ಮೀರದಲ್ಲಿ ಬಾಲಕಿ ಹತ್ಯೆಯಾದಾಗ ಕಣ್ಣೀರು ಹಾಕಿದರು. ಕರಾವಳಿಯಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆಗ ಯಾಕೆ ಮಾತನಾಡುವುದಿಲ್ಲ? ಶರತ್ ಮಡಿವಾಳ, ದೀಪಕ್ ರಾವ್ ಹತ್ಯೆಯಾದಾಗ ಅವರ ಧ್ವನಿ ಏನಾಗಿತ್ತು ? ಪ್ರಕಾಶ್ ರೈ ಹುಟ್ಟಿದ್ದು ಯಾವ ಧರ್ಮದಲ್ಲಿ ಎಂದು ಪ್ರಶ್ನಿಸಿದ ಮಂಜುಳಾ ರಾವ್, ಕಾವೇರಿ ವಿಚಾರದಲ್ಲಿ ಪ್ರಕಾಶ್ ರೈ ಅವರೇಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಪ್ರಕಾಶ್ ರೈ ಅವರು ವೇದವ್ಯಾಸ್ ಕಾಮತ್ ಅವರ ಪತ್ನಿ ಮತಯಾಚಿಸಿದ್ದು ಸರಿಯಲ್ಲ ಎಂದಿದ್ದಾರೆ. ವೇದವ್ಯಾಸ್ ಕಾಮತ್ ಅವರ ಪತ್ನಿ ಬಿಜೆಪಿಗೆ ಯಾಕೆ ಮತನೀಡಬೇಕು ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿ ಬರದಿದ್ದರೆ ಈ ನಾಡಿನಲ್ಲಿ ಹೆಣ್ಮಕ್ಕಳಿಗೆ ಬದುಕು ಕಷ್ಟ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಏನು ತಪ್ಪು ಎಂದು ಅರ್ಥವಾಗುತ್ತಿಲ್ಲ. ಯಾರದೋ ಸೈಟು, ಹಣದ ಆಶೆಗೆ ಬಿದ್ದು ಪ್ರಕಾಶ್ ರೈ ಈ ರೀತಿ ಮಾತನಾಡುತ್ತಿರಬಹುದು ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯೆ ಪೂರ್ಣಿಮಾ, ಬಿಜೆಪಿ ದಕ್ಷಿಣ ಮಂಡಲ ಉಪಾಧ್ಯಕ್ಷೆ ಕಾತ್ಯಾಯಿನಿ, ಬಿಜೆಪಿ ಮಂಗಳೂರು ದಕ್ಷಿಣ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ರಾವ್ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English