ಬಂಟ್ವಾಳ: ಪ್ರಧಾನಿ ಮೋದಿಗೆ ಮತಿಭ್ರಮಣೆಯಾಗಿದೆ. 2019 ರ ಬಳಿಕ ಮೋದಿ ನಿರುದ್ಯೋಗಿ ಎಂದು ನಟ ಪ್ರಕಾಶ್ ರೈ ವ್ಯಂಗ್ಯವಾಡಿದ್ದಾರೆ.
ಬಂಟ್ವಾಳದಲ್ಲಿ ನಡೆದ ಸಂವಿಧಾನ ಉಳಿವಿಗೆ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು, ಸುಳ್ಳನ್ನೇ ಹೇಳುವ ಜಾಯಾಮಾನದವರು ಬಿಜೆಪಿಯವರು. ಬೆದರು ಗೊಂಬೆಗಳ ತರಹ ಮಾತ್ರ ಬಿಜೆಪಿಯಿದೆ. ಬಿಜೆಪಿ ಪಕ್ಷಕ್ಕೆ ಸಿದ್ಧಾಂತ ಎಂಬುದೇ ಇಲ್ಲ. ಆರ್ ಎಸ್ಎಸ್ ಹೇಳಿದಂತೆ ಕೇಳುವ ಪಕ್ಷ ಎಂದು ಲೇವಡಿ ಮಾಡಿದರು.
2019 ರ ಬಳಿಕ ಮೋದಿ ನಿರುದ್ಯೋಗಿ. ಅನಂತರ ಮೋದಿ ಕರ್ನಾಟಕಕ್ಕೆ ಬಂದು ಕನ್ನಡ ಕಲಿಯಲಿ. ಆದ್ರೆ ವಯಸ್ಕರ ಶಿಕ್ಷಣ ಕೇಂದ್ರಕ್ಕೆ ಸೇರಬೇಕು. ಶಾಲಾ ಮಕ್ಕಳ ಜೊತೆಗೆ ನಿಮ್ಮ ಸ್ಥಾನ ಇಲ್ಲ. ನಿಮಗೆ ತೀಟೆ ತೀರಿಸೋಕೆ ಕರ್ನಾಟಕ ಬೇಕು. ಯಾವನೋ ನೆಹರೋ, ಟಿಪ್ಪು ಹಿಂದೆ ಏನೋ ಮಾಡಿ ಹೋಗಿದ್ದರೆ ಅದ್ರ ವಿಚಾರ ನಮಗೇಕೆ? ದೇಶದ ಜನತೆಗೆ ಅಭಿವೃದ್ಧಿ ವಿಚಾರದ ಬಗ್ಗೆ ಹೇಳಿ ಎಂದು ಪ್ರಕಾಶ್ ರೈ ತಾಕೀತು ಮಾಡಿದರು.
ಮಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಪರ ಪತ್ನಿ ಮತಬೇಟೆ ವಿಚಾರದಲ್ಲಿ ಮಾತನಾಡಿದ ಅವರು, ವಿಷ ಬೀಜ ಬಿತ್ತಿ ಮತ ಕೇಳಬೇಡಿ ಎಂದು ನಾನು ಹೇಳಿದೆ. ಬೇರೆಯವರು ಸೆಗಣಿ ತಿಂದರೆ ನೀವು ತಿನ್ನುತ್ತೀರಾ..? ಮುಗ್ದ ಹಿಂದೂ ಮಕ್ಕಳನ್ನ ಬಳಸುವ ಹೊಲಸು ರಾಜಕೀಯ ಬಿಡಿ. ಮಹಿಳೆಯರನ್ನ ಗೌರವಿಸದ ಪಕ್ಷದಿಂದ ಹೊರ ಬರಲು ಹೇಳಿ. ಸಮಾಜ ಸೇವೆ ಮಾಡಬೇಕೆಂದರೆ ಸ್ವತಂತ್ರವಾಗಿ ಸ್ಪರ್ಧಿಸಿ ಎಂದು ಹೇಳಿದರು.
Click this button or press Ctrl+G to toggle between Kannada and English