ಮಂಗಳೂರು : ಭಾರತೀಯ ಜನತಾ ಪಾರ್ಟಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತಲೂ ಹೆಚ್ಚು ಚರ್ಚಾ ವಿಚಾರ ಕರಾವಳಿಯಲ್ಲಿ, ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲುವ ಸೀಟೆಷ್ಟು ಎಂಬ ಬಗ್ಗೆ ಭಾರೀ ಚರ್ಚೆ ನಡೆದಿದೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಏಳು ಸ್ಥಾನ ಗೆದ್ದರೆ, ಬಿಜೆಪಿ ಗೆದ್ದಿರುವುದು ಕೇವಲ ಒಂದೇ. ಅಂದೂ 1300 ಮತಗಳ ಕಡಿಮೆ ಅಂತರದಿಂದ. ಉಡುಪಿಯಲ್ಲಿ ಕೂಡ ಬಿಜೆಪಿ ಗೆದ್ದಿರುವುದು ಒಂದೇ ಸ್ಥಾನ. ಕಾಂಗ್ರೆಸ್ ಮೂರು ಮತ್ತು ಒಬ್ಬ ಪಕ್ಷೇತರ ಗೆದ್ದಿದ್ದರು.
2019 ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕವನ್ನು ಗೆಲ್ಲುವುದು ಎರಡೂ ಪಕ್ಷಗಳಿಗೂ ಅನಿವಾರ್ಯವಾಗಿದೆ. ಕರ್ನಾಟಕದಲ್ಲಿ ಶತಾಯ ಗತಾಯ ಬಿಜೆಪಿ ಗೆಲ್ಲಲೇ ಬೇಕೆಂದು ಪಣ ತೊಟ್ಟಿದೆ.ಕಾಂಗ್ರೆಸ್ ಕೂಡ ಅಧಿಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಕೂಡ ಅದೇ ರೀತಿಯ ಪ್ರಯತ್ನ ನಡೆಸಿದೆ.
ಅದರಲ್ಲೂ ಬಂಟ್ವಾಳ, ಮಂಗಳೂರು, ಪುತ್ತೂರು, ಮಂಗಳೂರು ದಕ್ಷಿಣ ಪ್ರತಿಷ್ಠೆಯ ಕಣವಾಗಿದ್ದು, ಕೆಲವೊಂದು ಕಾಂಗ್ರೆಸ್ ಗೆಲುವು ಸಲಭವಾಗಲಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ದಕ್ಷಿಣ ಕನ್ನಡ ಪ್ರತಿಷ್ಠೆಯ ಕಣಗಳಲ್ಲಿ ಒಂದಾಗಿರುವ ಬಂಟ್ವಾಳದಲ್ಲಿ ಸಚಿವ ರಮಾನಾಥ ರೈ ಅವರನ್ನು ಸೊಲೀಸಲೇ ಬೇಕೆಂದು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಬಂಟ್ವಾಳದಲ್ಲಿ 1985, 1989, 1994, 1999, 2008 ಮತ್ತು 2013 ಹೀಗೆ ನಿರಂತರ ಆರು ಬಾರಿ ಬಿ.ರಮಾನಾಥ ರೈ ಆಯ್ಕೆ ಆಗಿದ್ದರು.
ಮಂಗಳೂರು ವಿಧಾನಸಭಾ ಕ್ಷೇತ್ರ ಸಚಿವ ಯು.ಟಿ.ಖಾದರ್ ಅವರ ಗೆಲುವಿಗೆ ಅಡ್ಡ ಹಾಕುವುದು ಅಸಾಧ್ಯ ಎಂದು ಬಿಜೆಪಿಯವರಿಗೂ ಗೊತ್ತಿದೆ. ಹಾಗಾಂತ ಬಿಜೆಪಿ ಸುಮ್ಮನೆ ಕುಳಿತ್ತಿಲ್ಲ.
ಬೆಳ್ತಂಗಡಿಯ ಹಾಲಿ ಶಾಸಕ ವಸಂತ ಬಂಗೇರ ಅವರನ್ನು ವೈಯುಕ್ತಿಕ ವರ್ಚಸ್ಸು ಕೈ ಹಿಡಿಯಬಹುದಾದರು, ಪುತ್ತೂರು ಮತ್ತು ಮೂಡಬಿದಿರೆಯಲ್ಲಿ ಫಲಿತಾಂಶ ಹೇಗೆ ಕೂಡ ಬದಲಾಗಬಹದು. ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಕ್ಷೇತ್ರಗಳಲ್ಲಿ ಬದಲಾವಣೆ ಆಗಬಹುದೇ, ಕಾಪು ಕ್ಷೇತ್ರದಲ್ಲಿ ಮತ್ತೆ ಫೋಟೋ ಫಿನಿಶ್ ಫಲಿತಾಂಶವೇ ಎಂಬುದನ್ನು ಕಾದು ನೋಡಬೇಕಾಗಿದೆ.
ಉಡುಪಿ, ಕುಂದಾಪುರ, ಬೈಂದೂರು ಕ್ಷೇತ್ರಗಳ ಫಲಿತಾಂಶ ಬಹುತೇಕ ನಿಶ್ಚಿತವಾಗಿದ್ದು, ಕಾರ್ಕಳ ಕ್ಷೇತ್ರದಲ್ಲಿ ಮತ್ತೆ ಫೋಟೋ ಫಿನಿಶ್ ಫಲಿತಾಂಶ ಬರಬಹುದು ಎನ್ನಲಾಗುತ್ತಿದೆ.
ಸುಳ್ಯ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತರೆ ಆ ಸೋಲಿನ ಹೊಣೆಯನ್ನು ಕಾಂಗ್ರೆಸ್ ಮುಖಂಡರೇ ಹೊತ್ತುಕೊಳ್ಳ ಬೇಕಾದೀತು.
.
Click this button or press Ctrl+G to toggle between Kannada and English