ಮಂಗಳೂರು: ಮೋದಿಯವರಿಗೆ ತನ್ನ ರಾಜಕೀಯ ಗುರು ಎಲ್.ಕೆ.ಅಡ್ವಾಣಿಯವರ ಮೇಲೆ ಇಲ್ಲದ ಮಮಕಾರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೇಲೆ ಹೇಗೆ ಉಕ್ಕಿ ಬಂತು ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಜೈವೀರ್ ಶೇರ್ಗಿಲ್ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಪ್ರಧಾನಿಯವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮತದಾರರನ್ನು ದಾರಿ ತಪ್ಪಿಸುತ್ತಿವೆ. ಒಂದು ಕಡೆಯಿಂದ ದೇವೇಗೌಡರು ಬಿಜೆಪಿಯೊಂದಿಗೆ ಕೈಜೋಡಿಸಿದರೆ ನನ್ನ ಮಗನನ್ನು ಕುಟುಂಬದಿಂದ ಬಹಿಷ್ಕಾರ ಹಾಕುತ್ತೇನೆ ಎಂದು ಹೇಳುತ್ತಾರೆ. ಮತ್ತೊಂದೆಡೆ ಕುಮಾರಸ್ವಾಮಿ ಅಮಿತ್ ಶಾ ಜೊತೆ ಸಭೆ ನಡೆಸುತ್ತಾರೆ. ಮತ್ತೊಂದೆಡೆಯಿಂದ ಮೋದಿಯವರು ನನ್ನ ಹೃದಯದ ಬಡಿತ ದೇವೇಗೌಡರು ಎಂದು ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರ ಹಿರಿಯರಾದ ಎಲ್.ಕೆ.ಅಡ್ವಾಣಿಯವರಿಗೆ ಹೇಗೆ ಗೌರವ ನೀಡಬೇಕು ಎಂದು ತಿಳಿದಿಲ್ಲ. ಎಲ್.ಕೆ.ಅಡ್ವಾಣಿಯವರ ಸ್ಥಿತಿಯನ್ನು ಗಮನಿಸಿ. ಅವರು ಮೋದಿಯವರಿಂದ ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ಗಮನಿಸಿ. ಇದು ಕರ್ನಾಟಕದ ಜನತೆಗೆ ನನ್ನ ಮನವಿ ಎಂದು ಜೈವೀರ್ ಶೇರ್ಗಿಲ್ ಹೇಳಿದರು.
Click this button or press Ctrl+G to toggle between Kannada and English