ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಅವರು ಕಾಂತರಾಜ್ ಶೆಟ್ಟಿ ಲೈನ್ ಮಣ್ಣಗುಡ್ಡ ವಾರ್ಡ್ ನಂ.28 ರಲ್ಲಿ ಮನೆ ಮನೆಗೆ ಭೇಟಿ ನೀಡಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಒಂದೆಡೆ ಕತ್ತಲೆ ಸರಿದು ಬೆಳಕು ಮೂಡುತ್ತಿದೆ. ಅಂತೆಯೇ ರಾಜ್ಯಕ್ಕೆ ಕವಿದಿರುವ ಕತ್ತಲೆಯೂ ಸರಿಯಲಿದೆ, ಬೆಳಕು ಮೂಡಲಿದೆ. ಬಿಜೆಪಿ ಅಧಿಕಾರಕ್ಕೆ ಬರಲಿದೆ. ನಮ್ಮಂತಹ ನಾಗರಿಕರು ನೆಮ್ಮದಿಯ ಬದುಕು ಸಾಗಿಸಲಿದ್ದೇವೆ ಎಂದು ಹೇಳುವ ಮೂಲಕ ಹಲವು ಮನೆಗಳ ಬಂಧುಗಳು ನಮ್ಮನ್ನು ಸ್ವಾಗತಿಸಿದರು ಎಂದು ವೇದವ್ಯಾಸ್ ಕಾಮತ್ ಅವರು ಹೇಳಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಹ ಸಂಚಾಲಕ್ ಶ್ರೀ ರವಿಶಂಕರ್ ಮಿಜಾರ್, ಜಯಂತಿ ಆಚಾರ್, ಮೋಹನ್ ಆಚಾರ್, ವಸಂತ್ ಶೇಟ್, ಮಹೇಶ್ ಕುಂದರ್, ಗುರುಚರಣ್ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English