ಮಂಗಳೂರು: ತುಳುನಾಡಿನ ಬಹುತೇಕ ಮನೆಗಳಲ್ಲಿ ಇಂದು ಒಂದಿಷ್ಟು ಬೆಳಕು ಕಾಣುತ್ತಿದ್ದರೆ, ಅದರ ಹಿಂದೆ ಬೀಡಿ ಕಟ್ಟುವ ತಾಯಂದಿರ ಪರಿಶ್ರಮವಿದೆ. ಕಷ್ಟಪಟ್ಟು ಮನೆ ಕೆಲಸ ಮಾಡುತ್ತಲೇ ಬೀಡಿಯನ್ನೂ ಕಟ್ಟಿ ಕುಟುಂಬಗಳನ್ನು ನಡೆಸಿದ್ದಾರೆ, ಅನ್ನ, ಬಟ್ಟೆಗಳನ್ನು ಹೊಂದಿಸಿದ್ದಾರೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಹೇಳಿದರು.
ಇಂದು ಕುಳಾಯಿ ಜಂಕ್ಷನ್ ನಲ್ಲಿ ಸಿಪಿಐಎಂ ಪಕ್ಷದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಪರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಂದು ಬೀಡಿ ಉದ್ಯಮ ಸಂಕಷ್ಟದಲ್ಲಿದೆ. ಬೀಡಿ ಕಟ್ಟುವ ತಾಯಂದಿರಿಗೆ ಮಜೂರಿ ಹೆಚ್ಚಿಸಲು ಮಾಲೀಕರು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ಬೀಡಿ ಕಟ್ಟುವ ತಾಯಂದಿರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಯಾವ ಸಂಕಟಗಳ ಅರಿವೂ ಇಲ್ಲದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು, ತಮ್ಮನ್ನು ಗೆಲ್ಲಿಸಿದರೆ ಬಡವರನ್ನು ಉದ್ಧಾರ ಮಾಡುತ್ತೇವೆ ಎಂದು ಭಾಷಣ ಬಿಗಿಯುತ್ತಿದ್ದಾರೆ. ಸಾವಿರ ಬೀಡಿಗೆ ಮಜೂರಿ ಎಷ್ಟೆಂದೇ ಗೊತ್ತಿಲ್ಲದವರು, ಬೀಡಿ ಕಟ್ಟಿ ಕುಟುಂಬ ನಡೆಸುವ ಬಡವರನ್ನು ಉದ್ಧರಿಸುವುದು ಸಾಧ್ಯವೇ
Click this button or press Ctrl+G to toggle between Kannada and English