ಹಣಕ್ಕಾಗಿ ವೈದ್ಯಕೀಯ ವಿದ್ಯಾರ್ಥಿ ಅಪಹರಣ

8:04 PM, Friday, October 14th, 2011
Share
1 Star2 Stars3 Stars4 Stars5 Stars
(5 rating, 5 votes)
Loading...

Medical-Student Kidnap

ಉಳ್ಳಾಲ: ದೇರಳಕಟ್ಟೆಯ ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನ್ಶಿಪ್‌ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ತಂಡವೊಂದು ಹಣಕ್ಕಾಗಿ ಬುಧವಾರ ತಡರಾತ್ರಿ ಅಪಹರಣ ನಡೆಸಿದ್ದು, ಗುರುವಾರ ಮುಂಜಾನೆ ಕೇರಳದ ಮಂಜೇಶ್ವರದ ಉದ್ಯಾವರದ ಬಳಿ ಜಖಂಗೊಳಿಸಿ ಬಿಟ್ಟಿದ್ದಾರೆ.   ದೇರಳಟ್ಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಂಪ್ಲೆಕ್ಸ್‌ ಒಂದರಿಂದ ವಿದ್ಯಾರ್ಥಿಯನ್ನು ಅಪಹರಿಸಲಾಗಿದ್ದು ಹಣಕ್ಕಾಗಿ ಈ ಅಪಹರಣ ನಡೆದಿದೆ ಎನ್ನಲಾಗಿದೆ. ಕಾಲೇಜಿನ ಎದುರಿಗಿರುವ ಫ್ಲಾಟ್‌ನಲ್ಲಿ ವಿದ್ಯಾರ್ಥಿ ವಾಸವಾಗಿದ್ದ. ವಿದ್ಯಾರ್ಥಿಯನ್ನು ಕೇರಳದ ತ್ರಿಶೂರ್‌ ನಿವಾಸಿ ಮಹಮ್ಮದ್‌ ನೆಬಿಲ್‌(23) ಎಂದು ಗುರುತಿಸಲಾಗಿದೆ. ನೆಬಿಲ್‌ನ ತಂದೆ ತಾಯಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಕಾಂಪ್ಲೆಕ್ಸ್‌ ನ ಣಕಾಸಿನ ವ್ಯವಹಾರ ನೆಬಿಲ್‌ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಐದು ಜನರ ತಂಡ ಬುಧವಾರ ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ಗೆ ಬಂದು ಕಾಲಿಂಗ್‌ ಬೆಲ್‌ ಒತ್ತಿದಾಗ ಹೊರಗಡೆ ಬಂದ ನೆಬಿಲ್‌ನನ್ನು ಕೆಳಗಡೆ ಕರೆದುಕೊಂಡು ಬಂದಿದ್ದು ಬಳಿಕ ಕಾರಿನಲ್ಲಿ ಈತನ ಕಣ್ಣಿಗೆ ಬಟ್ಟೆ ಕಟ್ಟಿ ಅಪಹರಿಸಲಾಗಿದೆ.

ಅಪಹರಣಕಾರರ ತಂಡ 50 ಲಕ್ಷ ರೂ ಬೇಡಿಕೆ ಇಟ್ಟಿದ್ದು ಇದಕ್ಕೆ ವಿದೇಶದಲ್ಲಿರುವ ಆತನ ತಂದೆಗೆ ದೂರವಾಣಿ ಮೂಲಕ ಕರೆ ಮಾಡಿ ಹಣ ತರಿಸಿಕೊಳ್ಲಲು ಬೆದರಿಕೆ ಹಾಕಿದರು ಎನ್ನಲಾಗಿದೆ. ವಿದೇಶದಲ್ಲಿದ್ದ ಹೆತ್ತವರೊಂದಿಗೆ ಸಂಪರ್ಕ ನಡೆಯದೆ ಇದ್ದ ಹಿನ್ನಲೆಯಲ್ಲಿ ತಂಡ ಆತನಿಗೆ ಚೆನ್ನಾಗಿ ಥಳಿಸಿ ಮಂಜೇಶ್ವರದ ಉದ್ಯಾವರದ ಬಳಿ ಬೆಳಗ್ಗೆ ಬಿಟ್ಟಿದ್ದಾರೆ.

ಕಾರಿನಿಂದ ಇಳಿದ ನೆಬಿಲ್‌ ಸ್ಥಳೀಯರ ಸಹಾಯದೊಂದಿಗೆ ಉಳ್ಳಾಲ ಪೊಲೀಸ್‌ ಠಾಣೆಗೆ ಹಾಜರಾಗಿ ಮಾಹಿತಿ ನೀಡಿದ್ದಾನೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಮಂಗಳೂರು ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ ಮಾರ್ಗದರ್ಶನದಲ್ಲಿ ಪೊಲೀಸರು ಮಂಗಳೂರು ಸೇರಿದಂತೆ ಕೇರಳಕ್ಕೆ ತೆರಳುವ ಎಲ್ಲಾ ವಾಹನಗಳನ್ನು ರಾತ್ರಿಯಿಡೀ ನಾಕಾಬಂಧಿ ನಡೆಸಿ ತಪಾಸಣೆ ನಡೆಸಿದರು.

ಅಪಹರಣಕಾರರು ನಾಪತ್ತೆಯಾಗಿದ್ದು. ತನಿಖೆ ಪ್ರಗತಿಯಲ್ಲಿದೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English