ಶ್ರೀ ನಾರಾಯಣ ಗುರು, ಕೋಟಿ ಚೆನ್ನಯರು ನಮಗೆ ಆದರ್ಶ – ಸುನೀಲ್ ಕುಮಾರ್ ಬಜಾಲ್

5:12 PM, Wednesday, May 2nd, 2018
Share
1 Star2 Stars3 Stars4 Stars5 Stars
(No Ratings Yet)
Loading...

sunil-kumarಮಂಗಳೂರು: ಮಂಗಳೂರು ನಗರವು ಒಂದು ಕಾಲದಲ್ಲಿ ಸೌಹಾರ್ದತೆಯ ತಾಣ ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿ ಸೌಹಾರ್ದತೆಯನ್ನು ನಾಶ ಮಾಡುವ ಹುನ್ನಾರ ಕೋಮವಾದಿಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ. ಸೌಹಾರ್ದತೆಯನ್ನು ಕಾಪಾಡಲು ಪಣ ತೊಡಬೇಕಾಗಿದ ಕಾಂಗ್ರೆಸ್ ಪಕ್ಷದ ನಾಯಕರು ಮಾತ್ರ ಮೊದಲೇ ಮೃದು ಹಿಂದುತ್ವವಾದಿ ಮನೋಭಾವಕ್ಕೆ ಒಳಗಾಗಿದ್ದಾರೆ. ಇಂತಹ ಅಪಾಯಕಾರಿ ಸ್ಥಿತಿಯಲ್ಲಿರುವ ಸಿಪಿಐ(ಎಂ) ಪಕ್ಷವೆ ಮಾತ್ರವೇ ಜಿಲ್ಲೆಯಲ್ಲಿ ಕೋಮವಾದಕ್ಕೆದುರಾಗಿ ಐಕ್ಯತೆಯನ್ನು ಬೆಳೆಸಲು ನಿರಂತರ ಶ್ರಮವಹಿಸಿದೆ.

ಸೌಹಾರ್ದತೆ ಬಯಸಲು ಸಿಪಿಐ(ಎಂ) ಪಕ್ಷ ಮಾತ್ರವೇ ಒಂದೇ ಜಾತಿ ಒಂದೇ ಮತ ಧರ್ಮಗಳ ವೇದವನ್ನು ಸಾರಿದ ಶ್ರೀ ನಾರಾಯಣ ಗುರು ಹಾಗೂ ಸತ್ಯದ ಹಾದಿಯಲ್ಲಿ ನಡೆಯಲು, ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಹೋರಾಡಿದ ನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಆದರ್ಶವನ್ನು ಮೈಗೊಡಿಸಿದೆ.

ಆದ್ದರಿಂದ ನಾರಾಯಣ ಗುರು, ಕೋಟಿ ಚೆನ್ನಯರು ನಮಗೆ ಆದರ್ಶ ಎಂದು ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ನಿನ್ನೆ ಉರ್ವಸ್ಟೋರ್‌ನಲ್ಲಿ ನಡೆದ ಪಕ್ಷದ ಚುನಾವಣಾ ಪ್ರಚಾರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಂಗಳೂರು ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಿದೆ. ಆದರೆ ಇಲ್ಲಿ ಬದುಕುವ ಶೇ 90%ರಷ್ಟಿರುವ ಬಡವರ ಜೀವನ ಅಭಿವೃದ್ಧಿಗೊಳ್ಳಲೇ ಇಲ್ಲ. ನಗರದ ಜನ ಸ್ವಂತ ಮನೆ ಇಲ್ಲದೆ ಕಂಗಲಾಗಿದ್ದಾರೆ, ಇರುವ ಹಲವು ಮನೆಗಳಿಗೆ ಹಕ್ಕು ಪತ್ರಗಳಿಲ್ಲ, ದುಡಿಯಲು ಸರಿಯಾದ ಉದ್ಯೋಗ ಇಲ್ಲ, ಇದ್ದ ಉದ್ಯೋಗಗಳಿಗೆ ಕನಿಷ್ಟ ವೇತನವು ಇಲ್ಲ, ಶಿಕ್ಷಣ ಸಂಪೂರ್ಣ ಖಾಸಗೀಕರಣಗೊಂಡು ದುಬಾರಿಯಾಗಿದೆ. ಆರೋಗ್ಯ ಕ್ಷೇತ್ರವೂ ಖಾಸಗೀಕರಣಗೊಂಡು ಸಣ್ಣಪುಟ್ಟ ರೋಗಗಳಿಗೂ ಅನಗತ್ಯ ಪರೀಕ್ಷೆ ಮಾಡಿಸಿ ವಸೂಲಿ ಮಾಡುತ್ತಿದೆ.

ಬಡವರ ಮಕ್ಕಳು ವೈದ್ಯರಾಗಲು ಇಲ್ಲಿ ಒಂದು ಸರಕಾರಿ ಮೆಡಿಕಲ್ ಕಾಲೇಜು, ಕನಿಷ್ಠ ಸರಕಾರಿ ಇಂಜಿನಿಯರಿಂಗ್ ಕಾಲೇಜು ಇಲ್ಲ, ಉದ್ಯೋಗವಿಲ್ಲದ ಯುವಜನತೆ ಹತಾಷರಾಗಿ ತಪ್ಪು ದಾರಿ ಹಿಡಿಯುತ್ತಿದ್ದಾರೆ. ಮಾತ್ರವಲ್ಲ ಗಾಂಜಾ ಅಫೀಮಿನಂತಹ ಮಾದಕ ದ್ರವ್ಯಕ್ಕೆ ಬಲಿಯಾಗುತ್ತಿದ್ದಾರೆ. ಅಕ್ರಮ ಮರಳುಗಾರಿಕೆ ಯಿಂದ ನದಿ ನೀರು ಕಲುಷಿತಗೊಂಡಿದೆ. ಹಾಗೆ ಇನ್ನು ಹಲವು ಗಂಭೀರ ಸಮಸ್ಯೆಗಳು ಕ್ಷೇತ್ರದಲ್ಲಿದ್ದರೂ ನಾವು ಆರಿಸಿ ಕಳುಹಿಸಿದ ಶಾಸಕರು ಈವರೆಗೂ ಇಂತಹ ಗಂಭೀರ ಪ್ರಶ್ನೆಗಳ ಬಗ್ಗೆ ಚಕಾರವೆತ್ತಿಲ್ಲ.

ಬದಲಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ADB ಯಿಂದ ತಂದ 360 ಕೋಟಿ ಸಾಲದಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಇಲ್ಲಿನ ಶಾಸಕರಾದ ಜೆ.ಆರ್.ಲೋಬೋ ನೇರ ಭಾಗಿಯಾಗಿದ್ದಾರೆ. ಬಿಜೆಪಿ ಹಿಂದುಗಳ ರಕ್ಷಣೆ ಹೆಸರಲ್ಲಿ ಹಿಂದೂಗಳನ್ನೇ ಕೊಲೆ ಮಾಡುತ್ತಿದ್ದಾರೆ. ಇಂತಹ ಪಕ್ಷಗಳ ನಡುವೆ ಸಿಪಿಐಎಂ ಕಳೆದ ಹಲವು ವರ್ಷಗಳಿಂದ ಇಲ್ಲಿನ ಜನಸಾಮಾನ್ಯರನ್ನು ಕಾಡುವ ಗಂಭೀರ ಸಮಸ್ಯೆಗಳಾದ ವಸತಿ,ನೀರು, ಹಕ್ಕು ಪತ್ರ ಹೀಗೆ ಹಲವು ಸಮಸ್ಯೆಗಳಿಗೆದುರಾಗಿ ಚಳವಳಿ ರೂಪಿಸುತ್ತಾ ಬಂದಿದೆ. ಆ ಮೂಲಕ ಬಡವರ, ಜನಸಾಮಾನ್ಯರ, ಬದುಕುವ ವಿಚಾರದ ಬಗ್ಗೆ ನಗರದ ಅಭಿವೃದ್ಧಿ ಬಗ್ಗೆ ಸ್ಪಷ್ಟ ಕಣ್ಣೋಟವನ್ನಿಟ್ಟುಗೊಂಡಿದೆ.

ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮತದಾರರು ಈ ಬಾರಿ ಸಿಪಿಐ(ಎಂ) ಪಕ್ಷದ ಕತ್ತಿ ಸುತ್ತಿಗೆ ನಕ್ಷತ್ರ ಚಿಹ್ನೆಗೆ ಮತ ನೀಡಿ ಆರಿಸಬೇಕೆಂದು ವಿನಂತಿಸಿದರು.

ವೇದಿಕೆಯಲ್ಲಿ ಈ ವೇಳೆ ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಚುನಾವಣಾ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಜಾಲ್, ಸ್ಥಳೀಯ ಮುಖಂಡರಾದ ಪ್ರಭಾ ಬೋಳೂರು, ಉಮಾಶಂಕರ್, ಪ್ರಶಾಂತ್ MB, ವಿಜಯ್ ಕುಮಾರ್, ಪ್ರದೀಪ್ ಉರ್ವಸ್ಟೋರ್ ಮುಂತಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English