ಮಂಗಳೂರು: ಮೊಗವೀರ ಸಮಾಜಕ್ಕೆ ದೋಣಿ ನಿರ್ಮಾಣದಿಂದ ಹಿಡಿದು ಬಲೆ ಖರೀದಿಸುವವರೆಗೆ ಉತ್ತಮ ಸೌಲಭ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನೀಡಿದೆ ಎಂದು ಶಾಸಕ ಮೊದಿನ್ ಬಾವಾ ಹೇಳಿದರು.
ಬೈಕಂಪಾಡಿಯಲ್ಲಿ ಪಣಂಬೂರು 11ನೇ ವಾಡ್ ನಲ್ಲಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರಾವಳಿ ಸಹಿತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತು ಕೊಟ್ಟು ಆಡಳಿತ ನಡೆಸಿದ್ದಾರೆ. ಎಲ್ಲಾ ಸಮುದಾಯಕ್ಕೂ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗೋವರ್ದನ ಶೆಟ್ಟಿಗಾರ್,ಕೆ.ಸದಾಶಿವ ಶೆಟ್ಟಿ, ವಿಜಯ್ ಆಚಾರ್ಯ, ನಾಗೇಶ್ ಸಾಲ್ಯಾನ್, ನವೀನ್ ಶ್ರೀಯಾನ್, ಲಕ್ಷ್ಮಣ ಸುವರ್ಣ, ಕೃಷ್ಣ ಪುತ್ರನ್, ಗಣೇಶ್ ಬಂಗೇರ, ಗಿರೀಶ್ ಸುವರ್ಣ, ಸುನೀಲ್, ಯಶವಂತ್ ಕೋಟ್ಯಾನ್, ಹರೀಶ್ ಬಂಗೇರ, ಉಮಾವತಿ, ಗಾಯತ್ರಿ ಲೀಲಾಧರ್, ಸುಕೇತ್, ಪ್ರೇಮ ಪುತ್ರನ್, ಮೀನಾಕ್ಷಿ ಅಮೀನ್, ಶಶಿಪ್ರಭಾ, ಲೋಲಾಕ್ಷಿ ತಿಂಗಳಾಯ, ಶ್ರೀ ರಕ್ಷಾ ,ಸುಪ್ರಿಯಾ ಬಂಗೇರ,ಅಮುಲಿ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English