ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌‌ ಹಿಂದೂ ಸಂಪ್ರದಾಯದಂತೆ ವಿವಾಹ!

6:19 PM, Wednesday, May 2nd, 2018
Share
1 Star2 Stars3 Stars4 Stars5 Stars
(No Ratings Yet)
Loading...

meghan-rajಬೆಂಗಳೂರು: ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌‌ ಇಂದು ಹಿಂದೂ ಸಂಪ್ರದಾಯದಂತೆ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ. ಬೆಳಗ್ಗೆ 10.30 ರಿಂದ 11 ವರೆಗಿನ ಮಿಥುನ ಲಗ್ನದಲ್ಲಿ ಚಿರಂಜೀವಿ ಸರ್ಜಾ ಮೇಘನಾಗೆ ಮಾಂಗಲ್ಯಧಾರಣೆ ಮಾಡಿದರು.

ಭಾನುವಾರ ಇಬ್ಬರೂ ಕ್ರೈಸ್ತ ಸಂಪ್ರದಾಯದಂತೆ ಕೋರಮಂಗಲದ ಚರ್ಚ್‌ನಲ್ಲಿ ಮದುವೆಯಾಗಿದ್ದರು. ಗೋಲ್ಡನ್‌ ಥೀಮ್‌ನಲ್ಲಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಂತೆ ಕಲ್ಯಾಣ ಮಂಟಪವನ್ನು ಸಿದ್ಧಗೊಳಿಸಲಾಗಿತ್ತು. ಮೊದಲು ಗೌರಿ ಪೂಜೆಯಿಂದ ಆರಂಭಿಸಿ ಮುತ್ತೈದೆಯರಿಗೆ ಬಾಗಿನ ಕೊಡುವುದು, ಕಾಶಿಯಾತ್ರೆ, ಪಾದಪೂಜೆ, ಹೀಗೆ ವಿವಿಧ ಶಾಸ್ತ್ರಗಳನ್ನು ನೆರವೇರಿಸಿದ ಬಳಿಕ ಮಾಂಗಲ್ಯಧಾರಣೆ ಮಾಡಲಾಯಿತು. ನಂತರ ಲಾಜಾ ಹೋಮ ನೆರವೇರಿಸಲಾಯಿತು.

ಅರಮನೆ ಮೈದಾನದ ವೈಟ್ ಪೆಟಲ್ಸ್‌‌‌‌‌‌‌ನಲ್ಲಿ ನಡೆದ ಸಂಭ್ರಮದ ಮದುವೆಯಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಪ್ರಮುಖರು ಭಾಗವಹಿಸಿದ್ದರು. ಕ್ರೀಮ್ ಕಲರ್ ಮತ್ತು ಗೊಲ್ಡ್ ಮಿಕ್ಸ್ ಗ್ರೀನ್ ಬಾರ್ಡರ್ ರೇಷ್ಮೆ ಸೀರೆಯಲ್ಲಿ ಮೇಘನಾ ಮಿಂಚುತ್ತಿದ್ದರೆ, ರೇಷ್ಮೇ ಪಂಚೆ ಶಲ್ಯದಲ್ಲಿ ಚಿರು ಸುಂದರವಾಗಿ ಕಾಣುತ್ತಿದ್ದರು.

ಹಿರಿಯ ನಟ ಶ್ರೀನಾಥ್ ದಂಪತಿ, ಅಭಿನಯ ಶಾರದೆ ಜಯಂತಿ, ಡಾ. ರಾಜ್‌ ಪುತ್ರಿ ಲಕ್ಷ್ಮಿ, ನಟ ಚಂದನ್‌, ಪುನೀತ್ ರಾಜ್‌‌‌‌ಕುಮಾರ್‌‌, ವಿನಯ ಪ್ರಸಾದ್‌‌‌‌, ವಿನಯ್ ರಾಜ್ ಕುಮಾರ್, ಸುಧಾ ಬೆಳವಾಡಿ , ಸಂಯುಕ್ತ ಹೊರನಾಡು, ಮಳಯಾಳಂ‌ ನಟಿ ನಜ್ರಿಯ ನಜೀಂ , ಫಹಾದ್ ಫಾಜಿಲ್, ಹಿರಿಯ ನಟ ಲೋಕನಾಥ್, ರಾಮಕೃಷ್ಣ, ಭಾರತಿ ವಿಷ್ಣುವರ್ಧನ್ ಹಾಗೂ ಇನ್ನಿತರರು ಚಿರು-ಮೇಘನಾ ವಿವಾಹಕ್ಕೆ ಸಾಕ್ಷಿಯಾದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English