ಮಂಗಳೂರು: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಹಾಗು ಮಾಜಿ ಸಚಿವ ಗಂಗಾಧರ ಗೌಡ ಬುಧವಾರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಅವರು ಕಾಂಗ್ರೆಸಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ತನ್ನ ಪುತ್ರ ರಂಜನ್ ಗೌಡ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಗಂಗಾಧರ ಗೌಡ ಕಾಂಗ್ರೆಸ್ ನತ್ತ ತಮ್ಮ ಚಿತ್ತ ಹರಿಸಿದ್ದಾರೆ.
ಬೆಳ್ತಂಗಡಿ ಬಿಜೆಪಿಗೆ ಆಘಾತ, ಕಮಲ ಬಿಟ್ಟು ‘ಕೈ’ ಹಿಡಿದ ಗೌಡದ್ವಯರು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗಂಗಾಧರ ಗೌಡರನ್ನು ಹೂಹಾರ ಹಾಕಿ ವೇದಿಕೆಗೆ ಸ್ವಾಗತಿಸಿದ ಡಿಕೆಶಿ, ಅವರನ್ನು ಕಾಂಗ್ರೆಸಿಗೆ ಸೇರ್ಪಡೆಗೊಳಿಸಿದರು. ನಂತರ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಗಂಗಾಧರ ಗೌಡ ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ವಿರುದ್ಧ ವಾಗ್ದಾಳಿ ನಡೆಸಿದರು. ಕೆಪಿಎಸ್ಸಿ ಹಗರಣದಲ್ಲಿ ಹರೀಶ್ ಪೂಂಜಾ ಪಾಲು ಪಡೆದಿದ್ದಾರೆ ಎಂದು ಆರೋಪಿಸಿದ ಅವರು, ಹರೀಶ್ ಪೂಂಜಾ ಕೆಪಿಎಸ್ಸಿ ಏಜೆಂಟ್ ಆಗಿ ಕೋಟ್ಯಾಂತರ ರೂಪಾಯಿ ಗುಳುಂ ಮಾಡಿದ್ದಾರೆ ಎಂದು ಕಿಡಿಕಾರಿದರು.
ಈ ಕೆಪಿಎಸ್ಸಿ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ತನಿಖೆಗೆ ಆದೇಶ ನೀಡಿದೆ. ಸೂಕ್ತ ತನಿಖೆ ನಡೆದರೆ ಹರೀಶ ಪೂಂಜಾ ಕೈಕೋಳ ತೊಡಿಸಿಕೊಳ್ಳಬೇಕಾಗುತ್ತದೆ. ಗಣಿ ಧಣಿ ಜನಾರ್ದನ ರೆಡ್ಡಿ ಕೈಚೀಲ ಹಿಡಿದು ಕೋಟಿ ರೂಪಾಯಿ ಲೂಟಿ ಮಾಡಿದ್ದಾನೆ. ಇಂತಹ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟು ಏನ್ ಸಾಧನೆ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. ಕ್ಷೇತ್ರ ಪರಿಚಯ: ಗೌಡ, ಬಂಗೇರ ಕುಟುಂಬಗಳ ಕದನ ಕಣ ಬೆಳ್ತಂಗಡಿ ನಾಯಿಗೆ ವಾಸನೆ ಸಿಕ್ಕಿದಂತೆ ಹಣವಿದ್ದಲ್ಲಿ ಆತನಿಗೆ ವಾಸನೆ ಸಿಗುತ್ತದೆ.
ಇಂತಹ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟು ಏನು ಸಂದೇಶ ನೀಡಿದೆ. ಜನ ಇಷ್ಟು ಕೀಳುಮಟ್ಟದ ರಾಜಕೀಯ ನಡೆಸುತ್ತಾರೆ ಎಂದುಕೊಂಡಿರಲಿಲ್ಲ. ಪೂಂಜಾ ರೆಡ್ ಲೈಟ್ ಏರಿಯಾದ ಮಾಲಕರಿಂದಲೇ ದೇವಸ್ಥಾನಗಳ ಜೀರ್ಣೋದ್ಧಾರೆ ಮಾಡಿಸುತ್ತಾರೆ ಎಂದು ಆರೋಪಿಸಿದರು. 60 ಸಾವಿರ ಮತಗಳನ್ನು ಪಡೆಯಲು ಇವರಿಗೆ ನಾನು ಬೇಕಾಯಿತು. ಇದರ ನಡುವೆಯೂ ಬಿಜೆಪಿಯವರು ಎಂಎಲ್ ಎ ಆಸೆ ತೋರಿಸುವ ಕೆಲಸ ಮಾಡಿದ್ದರು. ಆದರೆ, ನಾನು ಬೀದಿ ರಾಜಕೀಯ ಮಾಡಿಕೊಂಡು ಬದುಕಿದವನಲ್ಲ.
ಬಿಜೆಪಿಯವರು ಪ್ರಭಾಕರ ಬಂಗೇರರಿಗೆ ಟಿಕೆಟ್ ನೀಡಬಹುದಿತ್ತು. ಆದರೆ ಅವರಿಗೂ ನೀಡದೆ 420 ವ್ಯಕ್ತಿತ್ವದವನಿಗೆ ಟಿಕೆಟ್ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿದ್ಧರಾಮಯ್ಯ ಆಡಳಿತದ ವಿರುದ್ಧ ಮಾತನಾಡುವವರು ಎಷ್ಟು ಉತ್ತಮ ಆಡಳಿತ ನೀಡಿದ್ದಾರೆ ? ಮೌಲ್ಯವಿಲ್ಲದ ರಾಜಕೀಯ ಮಾಡಿ, ಕೆಟ್ಟಚಾಳಿ ಹೊಂದಿರುವವರು ಬಿಜೆಪಿಯವರು. ಇವೆಲ್ಲವನ್ನೂ ನಾನು ಹತ್ತಿರದಿಂದ ಕಂಡಿದ್ದೇನೆ. ಈ ಮೂರ್ಖ ಶಿಖಾಮಣಿಗಳಿಗೆ ಶ್ರೇಷ್ಠವಾದ ಮತ ಹಾಕಬಾರದು.
ಇವರಿಗೆ ಮತ ನೀಡಿದರೆ ಮಗಳನ್ನು ಒಬ್ಬ ಪೋಲಿಗೆ ಮದುವೆ ಮಾಡಿಕೊಟ್ಟಂತೆ. ಬೆಳ್ತಂಗಡಿಯಲ್ಲಿ ಬಿಜೆಪಿ ಗೆದ್ದರೆ ಮರ್ಯಾದಸ್ತರು ಬದುಕಲು ಕಷ್ಟವಿದೆ ಎಂದು ಅವರು ಹರಿಹಾಯ್ದರು. ಇಂದಿರಾಗಾಂಧಿ ನೀಡಿದ ಗಂಜಿ ಉಂಡು ಕಾಂಗ್ರೆಸ್ ಗೆ ಒದಿಬೇಡಿ . ಯುವಕರು ಕೆಟ್ಟವರೊಂದಿಗೆ ಸೇರಿ ಪೋಲಿಗಳಾಗಬಾರದು . ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆಗ್ತಾರಾ ಅಥವಾ ಡಿ.ಕೆ.ಶಿವಕುಮಾರ್ ಆಗ್ತಾರಾ ಗೊತ್ತಿಲ್ಲ. ಆದರೆ, 113 ಸೀಟುಗಳನ್ನು ಕಾಂಗ್ರೆಸ್ ರಾಜ್ಯದಲ್ಲಿ ಪಡೆಯಬೇಕಿದೆ ಎಂದು ಹೇಳಿದರು. ಗಂಗಾಧರ ಗೌಡ ಅವರ ಪುತ್ರ ರಂಜನ್ ಗೌಡ ಬುಧವಾರ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ. ಅವರು ಕೂಡ ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
Click this button or press Ctrl+G to toggle between Kannada and English