ಚುನಾವಣೆ ಯಾವುದೇ ಜಾತಿ ಧರ್ಮದ ಆಧಾರದಲ್ಲಿ ನಡೆಯುವುದಿಲ್ಲ: ಮೊಹಿಯುದ್ದೀನ್ ಬಾವಾ

4:29 PM, Thursday, May 3rd, 2018
Share
1 Star2 Stars3 Stars4 Stars5 Stars
(No Ratings Yet)
Loading...

mohuiddin-bavaಮಂಗಳೂರು: ಈ ಬಾರಿಯ ಚುನಾವಣೆ ಯಾವುದೇ ಜಾತಿ ಧರ್ಮದ ಆಧಾರದಲ್ಲಿ ನಡೆಯುವುದಿಲ್ಲ. ಕೇವಲ ಅಭಿವೃದ್ಧಿಯೊಂದೇ ಐಕ್ಯಮಂತ್ರವಾಗಲಿದೆ ಎಂದು ಶಾಸಕ ಮೊದಿನ್ ಬಾವಾ ಹೇಳಿದರು.

ಪಚ್ಚನಾಡಿಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ನಾನು ಶಾಸಕನಾಗಿ ಆಯ್ಕೆಯಾಗುವವರೆಗೆ ಕಾಂಗ್ರೆಸ್ ಸದಸ್ಯನಿರಬಹುದು. ಆದರೆ ಸಾಂವಿಧಾನಿಕ ಹುದ್ದೆ ಸ್ವೀಕರಿಸಿದ ಬಳಿಕ ಎಲ್ಲರ ಶಾಸಕನಾಗಿದ್ದೇನೆ. ಪಕ್ಷಜಾತಿಯನ್ನು ನೋಡದೆ ಎಲ್ಲಾ ಮಂಗಳೂರು ಮಹಾನಗರ ಪಾಲಿಕೆ ವಾರ್ಡ್, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್‌ಗೆ ಅನುದಾನ ಮಂಜೂರು ಮಾಡಿಸಿದ್ದೇನೆ ಎಂದರು.

ಈ ಹಿಂದೆ ಮಂಗಳೂರು ನಗರ ಸುತ್ತಮುತ್ತ ಅಭಿವೃದ್ಧಿಯಾಗುತ್ತಿದ್ದರೆ ತಾನು ಶಾಸಕನಾದ ಬಳಿಕ ಶೇ40ರಷ್ಟು ಅನುದಾನವನ್ನು ಮಂಗಳೂರು ಉತ್ತರ ಕ್ಷೇತ್ರದ ವಾರ್ಡ್‌ಗಳ ಅಭಿವೃದ್ಧಿಗೆ ಮೀಸಲು ಕಾಯ್ದಿರಿಸುವಲ್ಲಿ ಯಶಸ್ವಿಯಾಗಿದ್ದೇನೆ.ಪ್ರೀಮಿಯಂ ಎಫ್‌ಎಆರ್ ಅನುದಾನದಿಂದ ರಸ್ತೆ ವಿಸ್ತರಣೆ, ತಡೆಗೋಡೆ ರಚನೆ, ತೋಡು ನಿರ್ಮಾಣಕ್ಕೆ ಮಂಜೂರಾಗಿ ಕಾಮಗಾರಿ ಹಲವೆಡೆ ಪೂರ್ಣಗೊಂಡಿದೆ. ಅಮೃತ್ ಯೋಜನೆಯಡಿ ಒಳಚರಂಡಿ ದುರಸ್ತಿಗೆ ಅನುದಾನ ಮಂಜೂರಾಗಿದೆ ಎಂದರು.

ಕಳೆದ ಐದು ವರ್ಷದಲ್ಲಿ ಮಂಗಳೂರು ಉತ್ತರ ಕ್ಷೇತ್ರಕ್ಕೆ 700 ಕೋಟಿ ರೂ.ಅನುದಾನ ಮಂಜೂರುಗೊಳಿಸಿ ಅಭಿವೃದ್ಧಿ ಕಾರ್ಯವನ್ನು ನಡೆಸುವಲ್ಲಿ ಯಶಸ್ವಿಯಾಗಿದ್ದೇನೆ. ಸ್ವತಃ ಮುಖ್ಯಮಂತ್ರಿಗಳ ಬಳಿಯೇ ತೆರಳಿ ಅಭಿವೃದ್ಧಿಯ ಅಗತ್ಯತೆ ಮನವರಿಕೆ ಮಾಡಿದ ಕಾರಣ ವಿಳಂಬವಿಲ್ಲದೆ ಅನುದಾನ ಮಂಜೂರಾಗಿದೆ.ಸುಮಾರು 303ಕೋಟಿ.ರೂ ಅಂದಾಜು ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಅನುಷ್ಟಾನಗೊಳ್ಳಲು ಸಿದ್ದವಾಗಿದೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English