ಉಡುಪಿಯ ಕೃಷ್ಣಮಠದಲ್ಲಿ ಪ್ರಧಾನಿಗೆ ಭದ್ರತೆ ಇಲ್ಲ ಎಂದರೆ ಶ್ರೀಕೃಷ್ಣನನ್ನೇ ಅವಮಾನಿಸಿದಂತೆ: ಮಧ್ವರಾಜ್

4:37 PM, Thursday, May 3rd, 2018
Share
1 Star2 Stars3 Stars4 Stars5 Stars
(No Ratings Yet)
Loading...

pramod-madhwarajಉಡುಪಿ: ಉಡುಪಿಯ ಕೃಷ್ಣಮಠದಲ್ಲಿ ಪ್ರಧಾನಿಗೆ ಭದ್ರತೆ ಇಲ್ಲ ಎಂದರೆ ಶ್ರೀಕೃಷ್ಣನನ್ನೇ ಅವಮಾನಿಸಿದಂತೆ. ಇದು ಉಡುಪಿ ಜಿಲ್ಲೆಯ ಜನತೆಗೂ ಮಾಡಿದ ಅವಮಾನ ಎಂದು ರಾಜ್ಯ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಸಂಸದೆ ಶೋಭಾಗೆ ಟಾಂಗ್ ನೀಡಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಪ್ರಮೋದ್ ಮಧ್ವರಾಜ್, ಭದ್ರತಾ ಕೊರತೆ ಹಿನ್ನೆಲೆ‌ಯಲ್ಲಿ ಪ್ರಧಾನಿ ಮೋದಿಯವರ ಕೃಷ್ಣಮಠ ಭೇಟಿ ರದ್ದಾಗಿದೆ ಎಂದು ಹೇಳಿಕೆ ನೀಡಿದ್ದ ಶೋಭಾ ಕರಂದ್ಲಾಜೆ ಅವರಿಗೆ ಟಾಂಗ್ ನೀಡಿದರು.

ಕಾನೂನು‌‌ ಸುವ್ಯವಸ್ಥೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ನಂಬರ್ ವನ್ ಆಗಿದೆ. ಇದರ ಬಗ್ಗೆ ಲೋಕಸಭಾ ಸದಸ್ಯರು ಹೆಮ್ಮೆಪಡಬೇಕು. ಶ್ರೀಕೃಷ್ಣನಷ್ಟು ಶಕ್ತಿಶಾಲಿ ದೇವರು ಯಾರಿದ್ದಾರೆ. ಅವರ ಆಶೀರ್ವಾದದಿಂದ ನನಗೆ‌ ಮೂರು‌ ಭಡ್ತಿ‌ ಸಿಕ್ಕಿತು. ಪ್ರಧಾನಿ ಬಾರದೇ ಇರುವುದಕ್ಕೆ ಈ ರೀತಿ ಸಬೂಬು ನೀಡೋದು ಸರಿಯಲ್ಲ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

ಮಠಕ್ಕೆ ಸಿದ್ದರಾಮಯ್ಯ ಬಂದಿಲ್ಲ ಎಂದು ಬೊಬ್ಬೆ ಹಾಕುತ್ತಿದ್ದರು. ಪ್ರಧಾನಿ ಭೇಟಿ ನೀಡ್ತಾರೆ ಅಂತಾ ಸುಳ್ಳು ಸುದ್ದಿ ಹಬ್ಬಿಸಿದ್ದರು. ಪ್ರಧಾನ ಮಂತ್ರಿ ಬರುವುದಿಲ್ಲ ಎಂದು ಗೊತ್ತಾದ ಮೇಲೆ ನಾಟಕ ಮಾಡಿದ್ದು ಯಾಕೆ?ಪೂಜೆ ಸ್ಥಗಿತ ಮಾಡಿ ಭಕ್ತರಿಗೆ ತಡೆದಿದ್ದೇಕೆ? ಎಂದು ಪ್ರಮೋದ್ ಮಧ್ವರಾಜ್ ಪ್ರಶ್ನಿಸಿದರು.

ಬಾಂಬ್ ಬೆದರಿಕೆ ಇದ್ದಾಗಲೇ ನಾನು ಕೃಷ್ಣನ ಪವರ್ ಮುಂದೆ ಯಾವ ಬಾಂಬ್ ನಡೆಯಲ್ಲ ಅಂದಿದ್ದೆ. ಪಾಪ ಶೋಭಾ ಕರಂದ್ಲಾಜೆ ಅವರಿಗೆ ಯಾವ ಕ್ಷೇತ್ರ ಅಂತಾನೇ ಗೊತ್ತಿರಲಿಕ್ಕಿಲ್ಲ. ಇಡೀ ರಾಜ್ಯ ಸುತ್ತಾಡೋದ್ರಿಂದ ತನ್ನ ಕ್ಷೇತ್ರ ಮರೆತು ಹೋಗಿರಬಹುದು. ಇಲ್ಲಿ ಎಲ್ಲರು ಒಗ್ಗಟ್ಟಿನಿಂದಿದ್ದಾರೆ. ನರೇಂದ್ರ ಮೋದಿ ಯಾವುದೇ ದೇವಾಲಯಕ್ಕೂ ಹೋಗಲ್ಲ ಎಂದು ನೇರವಾಗಿ ಹೇಳಿಬಿಡಿ ಎಂದು ಸಚಿವ ಪ್ರಮೋದ್ ಮಧ್ವರಾಜ್ ವ್ಯಂಗ್ಯವಾಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English