ರಥಬೀದಿಯಲ್ಲಿ ಶ್ರೀಕರ ಪ್ರಭು ರೋಡ್ ಶೋ : ಯುವಕರ ರಣೋತ್ಸಾಹ

9:20 PM, Thursday, May 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

srikara prabhuಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಂಗೇರಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿರುವಂತೆಯೇ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಕೂಡ ತಮ್ಮ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಮನೆ ಮನೆ ಭೇಟಿಯ ಬಳಿಕ ಐದನೇ ಹಂತದಲ್ಲಿ ರೋಡ್ ಶೋ ನಡೆಸುವ ಮೂಲಕ ತಮ್ಮ ಪ್ರಬಲ ಜನಬೆಂಬಲವನ್ನು ಸಾಬೀತುಪಡಿಸಿದ್ದಾರೆ. ಗೌಡ ಸಾರಸ್ವತ ಬ್ರಾಹ್ಮಣ ಬಾಹುಳ್ಯದ ರಥಬೀದಿಯಲ್ಲಿ ತಮ್ಮ ಬೃಹತ್ ಪಾದಯಾತ್ರೆಯ ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀಕರ ಪ್ರಭು ಮತದಾರರನ್ನು ಸೆಳೆಯುವ ಎಲ್ಲ ಲಕ್ಷಣಗಳನ್ನು ಪ್ರದರ್ಶಿಸಿದ್ದಾರೆ. ತಮ್ಮ ಚುನಾವಣಾ ಚಿಹ್ನೆಯಾದ ಆಟೋ ರಿಕ್ಷಾದ ಮಾದರಿಯನ್ನು ರಿಕ್ಷಾ ಚಾಲಕರಿಗೆ ನೀಡುವ ಮೂಲಕ ಶ್ರೀಕರ ಪ್ರಭು ತಮ್ಮ ಮತಬೇಟೆಯ ಅಭಿಯಾನವನ್ನು ಅದ್ದೂರಿಯಾಗಿ ಆರಂಭಿಸಿದ್ದಾರೆ. ಇನ್ನು 5 ದಿನಗಳ ಕಾಲ ಮಂಗಳೂರಿನ ಪ್ರಮುಖ ಬೀದಿಗಳಲ್ಲಿ ಶ್ರೀಕರ ಪ್ರಭು ರೋಡ್ ಶೋ ನಡೆಸುವ ಮೂಲಕ ಎಲ್ಲರ ಗಮನ ಸೆಳೆಯಲಿದ್ದಾರೆ.

ಗಮನ ಸೆಳೆದ ಜ್ಯೂನಿಯರ್ ನರೇಂದ್ರ ಮೋದಿ

srikara prabhuರಥಬೀದಿಯಲ್ಲಿ ನರೇಂದ್ರ ಮೋದಿಯನ್ನು ಕಂಡು ಜನ ಹೌಹಾರಿದರು. ನರೇಂದ್ರ ಮೋದಿ ಅವರನ್ನು ಹೋಲುವ ಜ್ಯೂನಿಯರ್ ನರೇಂದ್ರ ಮೋದಿ @ ರಥಬೀದಿಯ ವಸಂತ ಪ್ರಭು ಅವರು ಎಲ್ಲರ ಗಮನಸೆಳೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಅವರ ಪರ ಪ್ರಚಾರದಲ್ಲಿ ತೊಡಗಿರುವ ಮಂಗಳೂರಿನ ಜ್ಯೂನಿಯರ್ ಮೋದಿ ಎಂದೇ ಖ್ಯಾತಿ ಪಡೆದ ವಸಂತ ಪ್ರಭು ಒಂದು ಕೈಯಲ್ಲಿ ರಿಕ್ಷಾದ ಪ್ರತಿಕೃತಿ ಇನ್ನೊಂದು ಕೈಯಲ್ಲಿ ಪ್ಯಾಂಪ್ಲೆಟ್ ಹಿಡಿದು ರೋಡ್ ಶೋದಲ್ಲಿ ಹೆಜ್ಜೆ ಹಾಕಿದರು. ಜ್ಯೂನಿಯರ್ ಮೋದಿಯನ್ನು ನೋಡಲು ಜನ ಮುತ್ತಿಹಾಕಿದರು. ಕೈ ಕುಲುಕಿ ಸೆಲ್ಫಿ ಪಡೆದು ಖುಷಿ ಪಟ್ಟರು. ರೋಡ್ ಶೋದಲ್ಲಿ ಪ್ರಧಾನ ಆಕರ್ಷಣೆಯಾಗಿ ವಸಂತ್ ಪ್ರಭು ಎಲ್ಲರ ಗಮನಸೆಳೆದರು. ಪ್ರಮುಖ ಎರಡು ಪಕ್ಷಗಳನ್ನು ಬಿಟ್ಟರೆ ಉಳಿದ ಯಾವ ಅಭ್ಯರ್ಥಿಯೂ ಇಷ್ಟೊಂದು ಭರ್ಜರಿಯಾದ ಪ್ರಚಾರವನ್ನು ನಡೆಸಿಲ್ಲ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಮೊದಲನೇ ದಿನವೇ ತಮ್ಮ ಪರವಾಗಿ ಹವಾ ಸೃಷ್ಟಿಸಿಕೊಳ್ಳುವಲ್ಲಿ ಶ್ರೀಕರ ಪ್ರಭು ಯಶಸ್ವಿಯಾಗಿದ್ದು ಮತ್ತೊಂದು ಗಮನಾರ್ಹ ಸಂಗತಿ. ಪ್ರಾರಂಭದಲ್ಲಿ ಶ್ರೀಕರ್ ಪ್ರಭು ಅವರ ಕುಟುಂಬ ಮತ್ತು ಬಾರಿ ಸಂಖ್ಯೆಯ ಅಭಿಮಾನಿಗಳು ಮತ್ತು ಚುನಾವಣಾ ಉಸ್ತುವಾರಿ ಸದಸ್ಯರ ಸಹಿತ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿಯ ಪರ್ವದಿನದಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಕರ ಪ್ರಭು ಅಭಿಮಾನಿ ಬಳಗದ ಅದ್ಯಕ್ಷರದ ಕೆ.ಪಿ. ಶೆಟ್ಟಿ ಬೇಡೆಮಾರ್, ಕಾರ್ಯದರ್ಶಿ ಪ್ರೇಮ್ ಚಂದ್ರ, ಉಸ್ತುವಾರಿ ಸುರೇಶ ಶೆಟ್ಟಿ, ಸಂಯೋಜಕ ಅವಿನಾಶ್ ಶೆಟ್ಟಿ, ಚಿತ್ರಕಲಾ ಪ್ರಭು, ಸೀಮಾ ಪ್ರಭು, ಐಶ್ವರ್ಯ ನಾಯಕ್, ಮಾಯಾ ನಾಯಕ್, ಶರತ್ ಅಮೀನ್, ನಿತಿನ್ ಸುವರ್ಣ, ಅಶ್ವಿತ್ ಕುಮಾರ್, ವಸಂತ್ ಪ್ರಭು, ಭಾಸ್ಕರ್ ಗಟ್ಟಿ, ಅನಿಲ್ ಕುಮಾರ್, ಆನಂದ ಶೆಟ್ಟಿ, ವೆಂಕಟರಮಣ ಮಲ್ಯ, ಜೈರಾಮ್ ಕಾಮತ, ರಾಮ್ ಮೋಹನ್, ಮಹೇಶ್ ಭಟ್, ಸೂರಜ್ ಪ್ರಭು, ರಘುನಾಥ್, ಮತ್ತಿತರು ಉಪಸ್ಥಿತರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English