ಬಿಜೆಪಿ ಎದುರಿಸುತ್ತಿದೆಯೇ ಭಿನ್ನಮತೀಯರ ಕಾಟ

9:42 PM, Thursday, May 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

BJP ಮಂಗಳೂರುಃ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಗುಂಪುಗಾರಿಕೆ  ಭಿನ್ನಮತೀಯರು ಹೆಚ್ಚುತ್ತಿದೆಯೇ. ಚುನಾವಣಾ ಸಂದರ್ಭದಲ್ಲಿ ಭಿನ್ನಮತೀಯರು ಕನಿಷ್ಟ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಗಳಿಗೆ ಆತಂಕ ಉಂಟು ಮಾಡುವ ಸಾಧ್ಯತೆ ಇದೆ.

ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಈಗಾಗಲೇ ಶ್ರೀಕರ ಪ್ರಭು ಕಣದಲ್ಲಿದ್ದಾರೆ, ಮತ್ತೊಬ್ಬ ಟಿಕೇಟ್ ಆಕಾಂಕ್ಷಿ ಬದರಿನಾಥ್ ಕಾಮತ್ ಬೆಂಗಳೂರು ಮಹಾನಗರ ಸೇರಿರುವ ಸುದ್ದಿ ಇದೆ.

ಕಳದೆ ಬಾರಿ ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿಯಾಗಿದ್ದ ರಂಜನ್ ಗೌಡ ತಂದೆ  ಮಾಜಿ ಸಚಿವ ಕೆ.ಗಂಗಾಧರ ಗೌಡ ಕಾಂಗ್ರೆಸ್  ಸೇರಿದ್ದಾರೆ .  ಇದು  ಬೆಳ್ತಂಗಡಿಯಲ್ಲಿ  ಬಿಜೆಪಿಗೆ  ಹಿನ್ನೆಡೆ ಎಂದೇ ಹೇಳಲಾಗುತ್ತಿದೆ.

ಆದರೆ, ಇಂತಹ ವಿದ್ಯಮಾನಗಳಿಂದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುತ್ತಾರೆ ಬಿಜೆಪಿ ಮುಖಂಡರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English