ಮಂಗಳೂರು: ಭ್ರಷ್ಟಾಚಾರ ವಿರೋಧಿ ಸಮಿತಿ ಮಂಗಳೂರು ಹಾಗೂ ಕೆನರಾ ಕಾಲೇಜಿನ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಟಿ.ವಿ ರಮಣ ಪೈ ಹಾಲ್ ನಲ್ಲಿ ಜರಗಿದ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ಸ್ವೀಕಾರ ಸಮಾರಂಭವನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತ ನ್ಯಾ| ಎನ್. ಸಂತೋಷ್ ಕುಮಾರ್ ಹೆಗೆಡೆ ಅವರು ದೀಪ ಬೆಳಗಿಸಿ ಉಧ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಭ್ರಷ್ಟಾಚಾರ ಹಾಗೂ ದುರಾಡಳಿತದ ವಿರುದ್ಧ ವಿದ್ಯಾರ್ಥಿಗಳು, ಯುವಜನತೆ ಎಚ್ಚೆತ್ತುಕೊಂಡು ಹೋರಾಟ ನಡೆಸದಿದ್ದರೆ ಈ ದೇಶ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯಲ್ಲಿ ಸಿಲುಕಿ ಕೊಳ್ಲುವುದರಲ್ಲಿ ಸಂದೇಹವಿಲ್ಲ, ಭ್ರಷ್ಟಾಚಾರ ಎಲ್ಲಾ ಕ್ಷೇತ್ರಗಳನ್ನು ಆವರಿಸಿರುವುದು ಆತಂಕಕಾರಿ ಎಂದು ಹೇಳಿದರು.
ಭ್ರಷ್ಟಾಚಾರ ಮುಕ್ತ ಜೀವನ ನಡೆಸಬೇಕಾದವರು ಕಾನೂನುಬದ್ಧವಾದ ಸಂಪಾದನೆಯಿಂದ ಮಾತ್ರ ನಿಜವಾದ ತೃಪ್ತಿ ಪಡೆಯಬಹುದು ಎಂದು ತಿಳಿದಿರಬೇಕು. ಶ್ರೀಮಂತಿಕೆ ಹೊಂದುಲು ಭ್ರಷ್ಟಾಚಾರದ ಆದಿ ಹಿಡಿಯುವುದು ತಪ್ಪು ಎಂದು ಸಲಹೆ ನೀಡಿದರು, ಅಕ್ರಮ ಹಾದಿಯಲ್ಲಿ ಕೆಲವು ಜನಪ್ರತಿನಿಧಿಗಳು, ಅಧಿಕಾರಿಗಳು ಸಾವಿರಾರು ಕೋಟಿ ರೂ. ಸಂಪಾದಿಸುತ್ತಾರೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ಬಿಡುಗಡೆಯಾಗುತ್ತದೆ. ಆದರೆ ಇದು ಸಮರ್ಪಕವಾಗಿ ವಿನಿಯೋಗ ಆಗುತ್ತಿಲ್ಲ. 2ಜಿ, ಕಾಮನ್‌ವೆಲ್ತ್ ಕ್ರೀಡಾಕೂಟ ನೂರಾರು ಸಾವಿರ ಕೋಟಿ ರೂ. ಭ್ರಷ್ಟಾಚಾರ ಸೇರಿದಂತೆ ವಿವಿಧ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ನ್ಯಾಯಾಂಗ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಪ್ರಸಂಗಗಳು ಹಲವೆಡೆ ನಡೆದಿವೆ. ನ್ಯಾ| ದಿನಕರ್, ಉತ್ತರಖಂಡದ ನಿರ್ಮಲ್ ಯಾದವ್ ಮುಂತಾದವರ ಪ್ರಕರಣಗಳು ಇದಕ್ಕೆ ಉದಾಹರಣೆ ಎಂದರು.
ಈ ಸಂದರ್ಭದಲ್ಲಿ ನ್ಯಾ| ಎನ್. ಸಂತೋಷ್ ಹೆಗ್ಡೆ ಅವರು ಪ್ರತಿಜ್ಞಾ ಬೋಧನೆ ನಡೆಸಿದರು. ‘ಭಾರತದ ಪ್ರಜೆಯಾದ ನಾನು ಯಾವುದೇ ರೀತಿಯಲ್ಲಿ ಯಾವುದೇ ಸ್ಥಿತಿಯಲ್ಲಿ, ಯಾವುದೇ ಕಾಲದಲ್ಲಿ ಭ್ರಷ್ಟನಾಗುವುದಿಲ್ಲ ಮತ್ತು ಇತರರು ಭ್ರಷ್ಟರಾಗದಂತೆ ಮಾಡುವುದರಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.
ಭ್ರಷ್ಟಾಚಾರ ರಹಿತ ಸಂಪನ್ನ, ಸಮೃದ್ಧ, ಸಾಮರಸ್ಯದ ಸುಖೀ ಭಾರತ ನಿರ್ಮಾಣವೇ ನನ್ನ ಪರಮ ಗುರಿ’ ಎಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಸಹಿತ ಉಪಸ್ಥಿತರಿದ್ದ ಎಲ್ಲರೂ ನಿಂತು ಪ್ರತಿಜ್ಞೆ ಸ್ವೀಕರಿಸಿದರು.
ಭ್ರಷ್ಟಾಚಾರ ವಿರುದ್ಧ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ಅವರಿಗೆ ಬೆಂಬಲ ಸೂಚಿಸಿ ಮಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ ಅಖೀಲ ಭಾರತ ಕಾರ್ಮಿಕ ಸಂಘದ ಮುಖಂಡರಾದ ಸುದತ್ ಜೈನ್ ಶಿರ್ತಾಡಿ ಮತ್ತು ಸಂತೋಷ್ ಕಾವೂರು ಅವರನ್ನು ಹೆಗ್ಡೆ ಸಮ್ಮಾನಿಸಿದರು.
ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಅನಂತಕೃಷ್ಣ ಅವರು ಮಾತನಾಡಿ, ಭ್ರಷ್ಟಾಚಾರ ವಿರುದ್ಧ ಸಾಮೂಹಿಕ ಸಂಕಲ್ಪ ಕೈಗೊಂಡಲ್ಲಿ ದೇಶ ಎದುರಿಸುತ್ತಿರುವ ಸಂಕಷ್ಟಕರ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಲು ಸಾಧ್ಯ ಎಂದು ಹೇಳಿದರು.
ಭ್ರಷ್ಟಾಚಾರ ವಿರೋಧಿ ಸಮಿತಿ ಗೌರವಾಧ್ಯಕ್ಷ ಏರ್ಯ ಲಕ್ಷ್ಮೀನಾರಾಯಣ ಆಳ್ವ ಆಶಯ ಭಾಷಣ ನಡೆಸಿದರು. ವಿದ್ಯಾರ್ಥಿಗಳಾದ ರಂಜನ್ ರಾವ್, ಆತ್ಮೀಯ ಜೆ. ಕಡಂಬ ಮತ್ತು ಅಕ್ಷತಾ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಎ. ರಾಮಚಂದ್ರ ಕಾರ್ಕಳ ಮತ್ತು ತುಕಾರಾಮ ಪೂಜಾರಿ ಅವರು ಅತಿಥಿಗಳನ್ನು ಪರಿಚಯಿಸಿದರು.
ಡಾ| ಜಿ.ಎನ್. ಭಟ್ ಸ್ವಾಗತಿಸಿದರು. ಸಮೀರ ಪುರಾಣಿಕ್ ವಂದಿಸಿದರು. ಪ್ರಮೀಳಾ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English
December 25th, 2011 at 15:03:56
oGDdsN bwungezzoedf, [url=http://webxbavzzmqc.com/]webxbavzzmqc[/url], [link=http://mugxjopadoch.com/]mugxjopadoch[/link], http://zdrfwptooowi.com/
November 24th, 2011 at 09:27:13
dc0x7J gvkoykqnpqle, [url=http://xiaxqflhjqca.com/]xiaxqflhjqca[/url], [link=http://bzwzthgphmvy.com/]bzwzthgphmvy[/link], http://ndqevjvfjans.com/
November 11th, 2011 at 06:52:48
9bMhif tgtuymxkkpnc, [url=http://rrznmuxqogqt.com/]rrznmuxqogqt[/url], [link=http://vtfdzngwcmyx.com/]vtfdzngwcmyx[/link], http://aspmvvxvujry.com/