ಮಡಿಕೇರಿ: ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡುತ್ತಿರುವ ಚಿತ್ರನಟ ಪ್ರಕಾಶ್ ರಾಜ್ ವಿರುದ್ಧ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ನನ್ನ ಅಚ್ಚುಮೆಚ್ಚಿನ ನಾಯಕ ಎಂದರು. ಚಿತ್ರನಟ ಪ್ರಕಾಶ್ ರಾಜ್‌ಗೆ ಮಾಡಲು ಯಾವುದೇ ಕೆಲಸಗಳಿಲ್ಲ. ಆದ್ದರಿಂದ ಹೋದಲ್ಲೆಲ್ಲ ಸಿನಿಮಾ ಡೈಲಾಗ್ ಹೊಡೆಯುತ್ತಿದ್ದಾರೆ. ಇದನ್ನು ಸಿನಿಮಾದಲ್ಲಿ ಮಾತ್ರ ಜನರು ಇಷ್ಟಪಡುತ್ತಾರೆಯೇ ಹೊರತು, ರಿಯಲ್ ಲೈಫ್‌ನಲ್ಲಿ ಈ ಡೈಲಾಗ್ ವರ್ಕೌಟ್ ಆಗಲ್ಲ ಎಂದರು.
ಉತ್ತಮ ವಿಚಾರಗಳನ್ನು ಎಲ್ಲರೂ ಇಷ್ಟಪಡಬೇಕೆಂದೇನೂ ಇಲ್ಲ. ಹಾಗೆಯೇ ಪ್ರಧಾನಿ ಮೋದಿ ಎಲ್ಲರಿಗೂ ಇಷ್ಟವಾಗಬೇಕೆಂದೂ ಇಲ್ಲ. ಮೋದಿ ಬಗ್ಗೆ ಮಾತನಾಡಬೇಕಾದ್ರೆ ಯೋಗ ಮತ್ತು ಯೋಗ್ಯತೆ ಎರಡೂ ಇರಬೇಕೆಂದು ವೆಂಕಟ್ ಹೇಳಿದ್ರು. ಪ್ರಕಾಶ್ ರಾಜ್ ಯಾವತ್ತೂ ದೇಶವನ್ನು ಪ್ರೀತಿಸಲ್ಲ. ಯೋಗ್ಯರ ಬಗ್ಗೆ ಅಸೂಯೆ ಪಡುತ್ತಿದ್ದಾರೆ. ಪ್ರಚಾರಕ್ಕಾಗಿ ಮೋದಿ ವಿರುದ್ಧ ಭಾಷಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ವೆಂಕಟ್ ಅವರು, ಮೋದಿ ಜಗತ್ತಿನಲ್ಲಿ ಭಾರತಕ್ಕೆ ಹೆಸರು ತಂದುಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ಮೋದಿಯನ್ನು ಬೈಯುವ ಪ್ರಕಾಶ್ ರಾಜ್ ಸಮಾಜಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಈ ರೀತಿಯ ಹೇಳಿಕೆಗಳಿಂದ ಪ್ರಚಾರ ಗಿಟ್ಟಿಸಿಕೊಂಡು ಮತ್ತಷ್ಟು ಆಫರ್‌ಗಳಿಗಾಗಿ ಎದುರು ನೋಡುತ್ತಿದ್ದಾರೆ ಎಂದು ಛೇಡಿಸಿದರು. `ಸಿನಿಮಾದಲ್ಲಿ ವಿಲನ್ ಎಂದು ಹೆಸರು ಪಡೆದ ನೀನು, ಜೀವನದಲ್ಲಿ ವಿಲನ್ ಆಗಬೇಡ’ ಎಂದು ಸಲಹೆ ನೀಡಿದರು. ಮೊದಲು ದೇಶದ ಪ್ರಧಾನಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಿ ಎಂದರು.
Click this button or press Ctrl+G to toggle between Kannada and English