ಮಂಗಳೂರು: ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ನಟ ಪ್ರಕಾಶ್ ರಾಜ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಸಿನೆಮಾದಲ್ಲಿ ತಮ್ಮ ಸಂಭಾವನೆ ದರ ಹೆಚ್ಚಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಕಾಶ್ ರಾಜ್ ಟೀಕಿಸುತ್ತಿದ್ದಾರೆ ಎಂದು ವೆಂಕಟ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯನ್ನು ಟೀಕಿಸುವ ಪ್ರಕಾಶ್ ರಾಜ್‌ಗೆ ಯೋಗ್ಯತೆಯಿಲ್ಲ. ಸಿನಿಮಾದಲ್ಲಿ ತನ್ನ ವ್ಯಾಲ್ಯೂ ಹೆಚ್ಚಿಸಲು ಮೋದಿಯನ್ನು ಟೀಕಿಸುತ್ತಿದ್ದಾರೆ ಅಷ್ಟೇ. ಯಾರಾದರೂ ದೊಡ್ಡವರನ್ನು ಟೀಕಿಸಿದರೆ ತಮ್ಮ ವ್ಯಾಲ್ಯೂ ಹೆಚ್ಚುತ್ತೆ ಎಂದು ಅವರು ತಿಳಿದುಕೊಂಡಿದ್ದಾರೆ ಎಂದು ಆಪಾದಿಸಿದರು.
ಸಿನಿಮಾ ಡೈಲಾಗ್ ಮೂಲಕ ಮೋದಿಯನ್ನು ಟೀಕೆ ಮಾಡುತ್ತಿದ್ದಾರೆ .ಪ್ರಧಾನಿ ಮೋದಿಗೆ ಸಾಕಷ್ಟು ಕೆಲಸ ಇದೆ. ಪ್ರಕಾಶ್ ರೈ ಸಿನಿಮಾದಲ್ಲಿಯೂ ವಿಲನ್. ನಿಜ ಜೀವನದಲ್ಲೂ ವಿಲನ್ ಎಂದು ವೆಂಕಟ್ ಟೀಕಿಸಿದರು.
ರಾಜರಾಜೇಶ್ವರಿ ನಗರದಲ್ಲಿ ನನ್ನನ್ನು ಸೋಲಿಸಿದರೆ ಜನರಿಗೆ ಸೋಲು ಆಗಲಿದೆ. ಶಾಸಕನಾಗಿ ಆಯ್ಕೆಯಾಗದಿದ್ದರೆ ಮಂಡ್ಯದಲ್ಲಿ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸುವೆ. ಅಲ್ಲಿ ಗೆದ್ದು ಪ್ರಧಾನಮಂತ್ರಿ ಆಗುವೆ.
ಆಗ ರಾಜರಾಜೇಶ್ವರಿ ಕ್ಷೇತ್ರದ ಜನ ಪಶ್ಚಾತಾಪ ಪಡಲಿದ್ದಾರೆ. ನಾನೇಕೆ ಮನೆಮನೆಗೆ ಬಂದು ನಮಸ್ಕರಿಸಿ ಮತ ಕೇಳಲಿ. ನಾನು ಒಳ್ಳೆಯ ಕೆಲಸ ಮಾಡಲಿದ್ದೇನೆ ಅಷ್ಟೇ ಎಂದರು.
ನನಗೆ ಪುರುಷರ ಚಪ್ಪಲಿ ಚುನಾವಣಾ ಚಿಹ್ನೆಯಾಗಿ ಸಿಕ್ಕಿದೆ. ಮಹಿಳೆಯರ ಚಪ್ಪಲಿ ನಿರೀಕ್ಷಿಸಿದ್ದೆ ಎಂದವರು ಹೇಳಿದರು.
Click this button or press Ctrl+G to toggle between Kannada and English