ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ರಘುಪತಿ ಭಟ್ ಉಡುಪಿ ಜಾಮಿಯ ಮಸೀದಿಯ ಆವರಣದಲ್ಲಿ ಇಂದು ಜುಮಾ ನಮಾಝಿನ ಬಳಿಕ ಮತ ಯಾಚನೆ ಮಾಡಿದರು.
ಮುಸ್ಲಿಮರ ಮತ ಬಿಜೆಪಿಗೆ ಅಗತ್ಯ ಇಲ್ಲ ಎಂಬ ಈಶ್ವರಪ್ಪ ಅವರ ಹೇಳಿಕೆ ಕುರಿತ ಸುದ್ದಿಗಾರ ಪ್ರಶ್ನೆಗೆ ಈ ವೇಳೆ ಉತ್ತರಿಸಿದ ರಘುಪತಿ ಭಟ್, ಮುಸ್ಲಿಮರ ಮತ ಬಿಜೆಪಿಗೆ ಅಗತ್ಯ ಇಲ್ಲ ಅಂತ ನಾನು ಎಲ್ಲೂ ಹೇಳಿಲ್ಲ. ಹಾಗೆ ಇದಿದ್ದರೆ ನಾನು ಇಂದು ಇಲ್ಲಿಗೆ ಬರುತ್ತಿರಲಿಲ್ಲ. ನಮಗೆ ಎಲ್ಲ ವರ್ಗದವರ ಮತ ಕೂಡ ಬೇಕು. ಹಾಜಿ ಅಬ್ದುಲ್ಲ ಹಾಗೂ ಡಾ.ವಿ.ಎಸ್. ಆಚಾರ್ಯರ ಕಾಲದಿಂದಲೂ ಉಡುಪಿಯಲ್ಲಿ ಸೌಹಾರ್ದ ಇದೆ ಎಂದರು.
ಬಿಜೆಪಿ ನಗರಸಭೆ ಆಡಳಿತ ಸಂದರ್ಭ ಮತ್ತು ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿನ ಅಭಿವೃದ್ಧಿ ಕೆಲಸವನ್ನು ಗುರುತಿಸಿ ಈ ಬಾರಿ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಲು ಎಲ್ಲ ಜಾತಿ ಮತ ಧರ್ಮದವರು ನಿರ್ಧರಿಸಿದ್ದಾರೆ. ಮುಸ್ಲಿಮ್ ಬಾಂಧವರಿಂದ ನಮಗೆ ನಿರೀಕ್ಷಿತ ಬೆಂಬಲ ದೊರೆಯುತ್ತಿದೆ ಎಂದು ರಘುಪತಿ ಭಟ್ ಹೇಳಿದರು.
Click this button or press Ctrl+G to toggle between Kannada and English