ಮಂಗಳೂರು: ಮನಪಾ 25ನೇ ದೇರೆಬೈಲು ಪಶ್ಚಿಮ ವಾರ್ಡಿನ ಕೊಟ್ಟಾರ ಪರಿಸರದ ಸುಮಾರು 35ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಕದ್ರಿಯಲ್ಲಿರುವ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊರ ಸಮ್ಮುಖ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಬಿಜೆಪಿ ಪಕ್ಷದ ದುರ್ಬಲ ಆಡಳಿತ, ನಾಯಕರಿಂದ ಕಾರ್ಯಕರ್ತರ ಶೋಷಣೆ, ಧರ್ಮದ ರಾಜಕೀಯದಿಂದ ಬೇಸತ್ತು ಮತ್ತು ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತ, ಜಾತ್ಯತೀತ ನಿಲುವುಗಳಿಂದ ಆಕರ್ಷಿತರಾಗಿ ಹಿರಿಯರಾದ ಚಂದ್ರಶೇಖರ, ರಾಜೇಶ್ ಶೆಟ್ಟಿ, ದುರ್ಗೇಶ್ ಹಾಗೂ ಯುವ ನಾಯಕರಾದ ಕಿಶನ್, ಪ್ರಜ್ವಲ್, ಸಾಗರ್, ರಾಕೇಶ್, ಪ್ರತೀಕ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವವರನ್ನು ಮುಕ್ತವಾಗಿ ಸ್ವಾಗತಿಸಲಾಗುತ್ತದೆ ಎಂದು ಜೆ.ಆರ್.ಲೋಬೋ ಹೇಳಿದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಕಾರ್ಪೊರೇಟರ್‌ಗಳಾದ ನಾಗವೇಣಿ, ಪ್ರವಿಣ್‌ಚಂದ್ರ ಆಳ್ವ, ಮಹಾಬಲ ಮಾರ್ಲ ಹಾಗೂ ಪಕ್ಷದ ಪ್ರಮುಖರಾದ ಪದ್ಮನಾಭ ಅಮೀನ್, ಸತೀಶ್ ಪೂಜಾರಿ, ಜಯರಾಮ ಕರಂದೂರು, ಮೋಹನಶೆಟ್ಟಿ, ಅಜಿತ್ ಕುಮಾರ್, ಚೇತನ್ ಕುಮಾರ್, ಮೆರಿಲ್ ರೇಗೋ, ಡೆನಿಸ್ ಡಿಸಿಲ್ವ, ಅರುಣ್ ಕೊವೆಲ್ಲೊ, ರಮಾನಂದ ಪೂಜಾರಿ, ಅಬ್ದುಲ್ ಅಝೀಝ್ ಮತ್ತಿತರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English