ಮೋದಿಗೆ ಅಂಬೇಡ್ಕರ್ ಬಗ್ಗೆ ಮಾತಾಡಲು ನೈತಿಕ ಹಕ್ಕಿಲ್ಲ: ಕಾಂಗ್ರೆಸ್ ನಾಯಕಿ ಶೆಲ್ಜಾ

1:30 PM, Saturday, May 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

ambedkarಮಂಗಳೂರು: ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಸುಳ್ಳುಗಳು ಹೊರಬರುತ್ತಿವೆ. ಪ್ರಧಾನಿ ಮೋದಿಗೆ ಅಂಬೇಡ್ಕರ್ ಬಗ್ಗೆ ಮಾತಾಡಲು ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ಕುಮಾರಿ ಶೆಲ್ಜಾ ಮಂಗಳೂರಿನಲ್ಲಿ ಹೇಳಿದ್ದಾರೆ.

ತಳಮಟ್ಟದಲ್ಲಿ ದಲಿತ ಸಮಸ್ಯೆಗಳು ಜ್ವಲಂತವಾಗಿ ಉಳಿದಿವೆ. ದಲಿತ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ. 1989ರಲ್ಲಿ ರಾಜೀವ್ ಗಾಂಧಿ ತಂದ ಕಾನೂನನ್ನು ಯುಪಿಎ ಎರಡನೇ ಅವಧಿಯಲ್ಲಿ ಮತ್ತಷ್ಟು ಪ್ರಬಲಗೊಳಿಸಲಾಯಿತು. ಆದರೆ ಮೋದಿ ಸರ್ಕಾರ 13 ಅಧ್ಯಾದೇಶ ಜಾರಿಗೊಳಿಸಿದೆ. ಇದರಿಂದ ದಲಿತ ದೌರ್ಜನ್ಯ ಕಾಯ್ದೆ ಹಲ್ಲಿಲ್ಲದ ಹಾವಾಗಿದೆ. ಮೋದಿಯವರದ್ದು ದಲಿತರ ಪರ ಕೇವಲ ಮೊಸಳೆ ಕಣ್ಣೀರು. ಬಜೆಟ್ ಅನುದಾನವನ್ನೂ ಗಣನೀಯವಾಗಿ ಕಡಿತಗೊಳಿಸಲಾಗಿದೆ ಎಂದರು.

ಉನ್ನಾವೋ, ಕಟುವಾ ಅತ್ಯಾಚಾರ, ದೌರ್ಜನ್ಯ ಪ್ರಕರಣ ಅತ್ಯಂತ ಹೇಯವಾಗಿದೆ. ಬಿಜೆಪಿ ಸರ್ಕಾರದಲ್ಲಿ ನಡೆದ ಕೃತ್ಯಕ್ಕೆ ಆಡಳಿತದ ಕುಮ್ಮಕ್ಕಿದೆ. ಇದರಿಂದಾಗಿ ನ್ಯಾಯಾಲಯವೇ ಮಧ್ಯಪ್ರವೇಶ ಮಾಡಬೇಕಾಗಿ ಬಂದಿದೆ. ಬಿಜೆಪಿಯ ಅತ್ಯಾಚಾರಿಗಳಿಂದ ಬೇಟಿ ಬಚಾವ್ ಆಗಬೇಕಾಗಿದೆ ಎಂದಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English